Select Your Language

Notifications

webdunia
webdunia
webdunia
webdunia

ಮೇ 17 ರವರೆಗೆ ಈ ರೈಲು ಓಡೋದಿಲ್ಲ

ಮೇ 17 ರವರೆಗೆ ಈ ರೈಲು ಓಡೋದಿಲ್ಲ
ಕಾರವಾರ , ಮಂಗಳವಾರ, 5 ಮೇ 2020 (16:08 IST)
ಪ್ರಯಾಣಿಕರ ರೈಲುಗಳು ಮೇ 17ರವರೆಗೆ ಓಡೋದಿಲ್ಲ.

ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮೇ 17ರವರೆಗೆ ಪ್ರಯಾಣಿಕರ ರೈಲುಗಳ ಸಂಚಾರ ಇರುವುದಿಲ್ಲ ಎಂದು ಕೊಂಕಣ ರೈಲ್ವೆ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕೊಂಕಣ ರೈಲ್ವೆ, ಮುಂದಿನ ಸೂಚನೆಯವರೆಗೂ ರೈಲು ಪ್ರಯಾಣದ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಇರುವುದಿಲ್ಲ.

ಆದರೆ ಲಾಕ್‌ಡೌನ್ ಅವಧಿಯಲ್ಲಿ ದೇಶದ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರ ನಾಗರೀಕರ ಸಲುವಾಗಿ `ಶ್ರಮಿಕ್ ವಿಶೇಷ ರೈಲು'ಗಳ ಸಂಚಾರಕ್ಕೆ ಅವಕಾಶವಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾಜ್ಯ ಸರ್ಕಾರಗಳು ಮನವಿ ಸಲ್ಲಿಸಬಹುದು.

ಉಳಿದಂತೆ, ಜೀವನಾವಶ್ಯಕ ವಸ್ತುಗಳನ್ನು ಸರಕು ಸಾಗಣೆ ರೈಲುಗಳಲ್ಲಿ ಮತ್ತು ಕೊಂಕಣ ರೈಲ್ವೆ `ರೋ ರೋ' ಸೇವೆಯ ಮೂಲಕ ದೇಶದ ವಿವಿಧ ಭಾಗಗಳಿಗೆ ತಲುಪಿಸಲಾಗುತ್ತಿದ್ದು, ಈ ಸೇವೆಯು ಮುಂದುವರೆಯಲಿದೆ ಎಂದು ತಿಳಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಳ್ಳಿಮಂದಿ ನಗರಕ್ಕೆ ಬರಲೇಬಾರದು ಎಂದು ಸಚಿವ