Publish Date: Tue, 05 May 2020 (15:46 IST)
Updated Date: Tue, 05 May 2020 (15:49 IST)
ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಕ್ಕೆ ಬರುವುದನ್ನು ನಿರ್ಭಂದಿಸುವಂತೆ ಸಚಿವರು ಹೇಳಿದ್ದಾರೆ.
ದಾವಣಗೆರೆ ನಗರ ಪ್ರದೇಶದಲ್ಲಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು ಗ್ರಾಮೀಣ ಪ್ರದೇಶಕ್ಕೆ ಹಬ್ಬದಂತೆ ತಡೆಗಟ್ಟಲು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಕ್ಕೆ ಬರುವುದನ್ನು ನಿರ್ಭಂದಿಸುವಂತೆ ರಾಜ್ಯ ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ದಾವಣಗೆರೆ ಗ್ರೀನ್ ಝೋನ್ ಗೆ ತೆರಳಿದ್ದು ಸಂತಸ ತಂದಿತ್ತು. ಆದರೆ, ಒಮ್ಮೆಲೆ 28 ಕೋವಿಡ್ ಸೋಂಕು ಪ್ರಕರಣಗಳು ಕಂಡುಬಂದಿರುವುದು ವಿಷಾದದ ಸಂಗತಿ. ಸದ್ಯಕ್ಕೆ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಜನರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಗ್ರಾಮೀಣ ಭಾಗದವರು ಯಾವುದೇ ಕಾರಣಕ್ಕೂ ನಗರಕ್ಕೆ ಬರದಂತೆ ತಡೆಯಬೇಕಿದೆ ಎಂದರು.