ಕಳ್ಳನೆಂದು ಶಂಕಿಸಿ ಸ್ಥಳೀಯರು ಯುವಕನೊಬ್ಬನನ್ನು ಥಳಿಸಿ, ತಲೆ ಬೋಲಿಸಿ ಅಮಾನವೀಯ ಕೃತ್ಯ ಎಸಗಿದ ವಿಡಿಯೋ ವೈರಲ್ ಆಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದ್ದು, ತಲೆ ಬೋಳಿಸಿದ ನಂತರ ಚರಂಡಿಯನ್ನು ಸ್ವಚ್ಛಗೊಳಿಸಲು ಸೂಚಿಸಲಾಗಿದೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. “ಕಳ್ಳತನ ಶಂಕೆ ಹಿನ್ನೆಲೆ ಶಕೀಲ್ ಎಂಬ ವ್ಯಕ್ತಿಯನ್ನು ಸ್ಥಳೀಯರು ಥಳಿಸಿದ್ದಾರೆ” ಎಂದು DCP ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ. ಆರೋಪಿಗಳು ವ್ಯಕ್ತಿಯ ತಲೆಯನ್ನು ಬೋಳಿಸಿ ಚರಂಡಿಯನ್ನು ಉಪಯೋಗಿಸುವಂತೆ ಮಾಡಿದ್ದಾರೆ. ಮನೆಯೊಂದರಿಂದ ನೀರಿನ ಪಂಪ್ ಅನ್ನು ಕದಿಯುವಾಗ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ತನಿಖೆಯಿಂದ ಪ್ರಕಟಿಸಲಾಗಿದೆ. ಭಾರತೀಯ ದಂಡನೆಯ ಸೆಕ್ಷನ್ 323, 341 ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಕೃತ್ಯದ ವಿಡಿಯೋ ಮಾಡಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ.