Select Your Language

Notifications

webdunia
webdunia
webdunia
webdunia

ಗಜಪಡೆ ಸ್ವಾಗತದ ವೇಳೆ ಕತ್ತಿ ಎಡವಟ್ಟು..!

ಗಜಪಡೆ ಸ್ವಾಗತದ ವೇಳೆ ಕತ್ತಿ ಎಡವಟ್ಟು..!
ಮೈಸೂರು , ಭಾನುವಾರ, 7 ಆಗಸ್ಟ್ 2022 (18:42 IST)
ಮೈಸೂರು ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣ ಆರಂಭವಾಗಿದೆ. ಕಾಡಿನಿಂದ ನಾಡಿಗೆ ಗಜಪಡೆ ಎಂಟ್ರಿ ಕೊಟ್ಟಿದ್ದು, ಗಜಪಯಣಕ್ಕೆ ಸಚಿವ ಎಸ್​.ಟಿ ಸೋಮಶೇಖರ್ ಚಾಲನೆ ನೀಡಿದ್ರು. ವೀರನಹೊಸಹಳ್ಳಿ ಅರಣ್ಯ ಪ್ರದೇಶದ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಗಜಪಯಣ ಕಾರ್ಯಕ್ರಮ ನಡೆಯಿತು.

ಇದೇ ವೇಳೆ ಗಜಪಡೆ ಸ್ವಾಗತದ ವೇಳೆ ಅರಣ್ಯ ಸಚಿವ ಉಮೇಶ್ ಕತ್ತಿ ಅವಾಂತರ ಮಾಡಿಕೊಂಡಿದ್ದಾರೆ. ಪೂಜೆ ವೇಳೆ ಶೂ ಧರಿಸಿ ಪಾಲ್ಗೊಂಡಿದ್ದು ಆಸ್ತಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ನಂತರ ಲಾರಿಗಳ ಮೂಲಕ‌ ಅಭಿಮನ್ಯು ನೇತೃತ್ವದ ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳೆಸಿದವು. ಈ ಬಾರಿ 14 ಆನೆಗಳು ಮೈಸೂರು ದಸರೆಯಲ್ಲಿ‌ ಭಾಗವಹಿಸಲಿವೆ. ಇದರಲ್ಲಿ 4 ಹೆಣ್ಣಾನೆಗಳು ಸೇರಿದಂತೆ 14 ಅನೆಗಳ ಪಟ್ಟಿ ಅಂತಿಮಗೊಂಡಿದೆ. ಮತ್ತಿಗೋಡು ಆನೆ ಶಿಬಿರದಿಂದ 39 ವರ್ಷದ ಗೋಪಾಲಸ್ವಾಮಿ, 57 ವರ್ಷದ ಅಭಿಮನ್ಯು, 22 ವರ್ಷ ಭೀಮ, 38 ವರ್ಷದ ಮಹೇಂದ್ರ, ಬಳ್ಳೆ ಆನೆ ಶಿಬಿರದಿಂದ 63 ವರ್ಷದ ಅರ್ಜುನ  ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

15 ನಿಮಿಷಕ್ಕೊಮ್ಮೆ ಮೆಟ್ರೋ ರೈಲು.!