Select Your Language

Notifications

webdunia
webdunia
webdunia
webdunia

ಪ್ರಿಯಕರ ಕೈಕೊಟ್ಟನೆಂದು ವಿದ್ಯಾರ್ಥಿನಿ ನೇಣಿಗೆ ಶರಣು! ಡೆತ್ ನೋಟ್ ನಲ್ಲಿ ಏನಿದೆ?

ಪ್ರಿಯಕರ ಕೈಕೊಟ್ಟನೆಂದು ವಿದ್ಯಾರ್ಥಿನಿ ನೇಣಿಗೆ ಶರಣು! ಡೆತ್ ನೋಟ್ ನಲ್ಲಿ ಏನಿದೆ?
ಚಿಕ್ಕಬಳ್ಳಾಪುರ , ಭಾನುವಾರ, 10 ಜುಲೈ 2022 (09:30 IST)
ಚಿಕ್ಕಬಳ್ಳಾಪುರ : ಕೃಷಿ ಮಹಾವಿದ್ಯಾಲಯದ ವಸತಿ ನಿಲಯದ ಕೊಠಡಿಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಬೂರ ಗ್ರಾಮದ ಕೃಷಿ ಮಹಾವಿದ್ಯಾಲಯದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಬನ್ನಿಕುಪ್ಪೆ ಗ್ರಾಮದ ಪವಿತ್ರಾ(21) ತಡರಾತ್ರಿ 11.30 ಗಂಟೆಗೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಂತಿಮ ವರ್ಷದಲ್ಲಿ ಬಿಎಸ್ಸಿ ಕೃಷಿ ವ್ಯಾಸಂಗ ಮಾಡ್ತಿದ್ದ ಪವಿತ್ರಾ ಕಾಲೇಜಿನ ವಸತಿನಿಲಯದಲ್ಲೇ ನೇಣು ಬಿಗಿದುಕೊಂಡಿದ್ದು, ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟು ಮೊಬೈಲ್ನಲ್ಲಿ ವೀಡಿಯೋ ಸಹ ಮಾಡಿದ್ದಾಳೆ ಎಂದು ಹೇಳಲಾಗಿದೆ. 

ಈಚೆಗಷ್ಟೇ ನನಗೆ ಅಪರಿಚಿತ ಯುವಕನ ಮೊಬೈಲ್ ನಂಬರ್ ಸಿಕ್ಕಿ ಆತನೊಂದಿಗೆ ಪರಿಚಯವಾಗಿ ಪ್ರೇಮವಾಗಿತ್ತು. ಆತ ಒಳ್ಳೆಯವನೆಂದು ಭಾವಿಸಿದ್ದೆ, ಆದ್ರೆ ಅವನು ಒಳ್ಳೆಯವನಲ್ಲ ಪರಿಚಯವಾದ ಕೆಲವೇ ದಿನಗಳಲ್ಲಿ ರೂಂ ಗೆ ಕರೆದಿದ್ದ.

ನಂತರ ನಾನು ಆತನೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದೆ. ಅದರೂ ಅವನು ಮತ್ತೆ ಮತ್ತೆ ಫೋನ್ಕಾಲ್, ಮೆಸೇಜ್ ಮಾಡುತ್ತಿದ್ದ. ಮತ್ತೆ ಪ್ರೇಮ ಶುರುವಾಗಿ ಆತನೇ ಪ್ರಪಂಚ ಎಂಬಂತಾಗಿತ್ತು. ಈ ವಿಚಾರ ಯುವಕನ ಮನೆಯಲ್ಲಿ ಗೊತ್ತಾಗಿ ಅವನ ಅಕ್ಕ ನನಗೆ ಕರೆ ಮಾಡಿ, ಬೈದಿದ್ದರು.

ಇದರಿಂದ ನಾವಿಬ್ಬರೂ ಬೇರೆಯಾಗೋಣ ಅಂತಾನೂ ತೀರ್ಮಾನ ಮಾಡಿದ್ದೀವಿ..’ ಎಂದು ಯುವತಿ ಬರೆದಿದ್ದಾಳೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಬರೆದಿಲ್ಲ.

ಪ್ರಕರಣ ದಾಖಲಿಸಿಕೊಂಡಿರುವ ಚಿಂತಾಮಣಿ ಗ್ರಾಮಾಂತರ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ಪ್ರಧಾನಿ ಮನೆಗೆ ಬೆಂಕಿ !