ಹುಬ್ಬಳ್ಳಿ ಯಲ್ಲಿ ಗಲಾಟೆ ಮಾಡಿದವರು ಯಾರೂ ಅಮಾಯಕರಲ್ಲ. ಹೀಗಾಗಿ ಗಲಬೆಕೋರರ ವಿರುದ್ಧ ಗೂಂಡಾ ಆಕ್ಟ್ ನಲ್ಲಿ ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದು ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಇದು ಪ್ರೀ ಪ್ಲಾನ್ ಕಾರ್ಯಕ್ರಮ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ನವರು ಮುಸ್ಲಿಮರನ್ನ ಯಾವಾಗಲೂ ಅಮಾಯಕರೆಂದು ಹೇಳ್ತಾರೆ. ಆದ್ರೆ ಅಮಾಯಕರು ಎನ್ನುವುದೇ ಒಂದು ಸ್ಟ್ಯಾಂಡ್ ಅಷ್ಟೇ ಎಂದ್ರು. ಇನ್ನು ಹೆಚ್ ಡಿಕೆ ವಿರುದ್ಧ ಗುಡುಗಿದ ಮುತಾಲಿಕ್, ನಾಚಿಕೆ ಆಗಲ್ವಾ ನಿಮಗೆ, ಅವ್ರು ಅಮಾಯಕರಾ ಕುಮಾರಸ್ವಾಮಿ ಅವರೇ ಎಂದ್ರು. ಹೋಮ ಹವನ ಮಾಡುವಂತಹ ನೀವು ಪೋಲಿಸ್ ಸ್ಟೇಷನ್ ಮೇಲೆ, ದೇವಸ್ಥಾನದ ಮೇಲೆ ಕಲ್ಲು ತೂರಿದವರು ಅಮಾಯಕರಾ..? ಎಂದು ಪ್ರಶ್ನಿಸಿದ್ದಾರೆ. ಮುಸ್ಲಿಮರ ಪರ ನಿಂತು ಕಾಂಗ್ರೆಸ್ ನೆಲಕಚ್ಚಿದೆ, ಕುಮಾರಸ್ವಾಮಿಯವರೇ ಮುಂದಿನ ದಿನಗಳಲ್ಲಿ ಇದೇ ನಿಲುವು ಅನುಸರಿಸಿದರೆ ಜೆಡಿಎಸ್ ಕೂಡ ನೆಲಕಚ್ಚುತ್ತೆ ಎಂದರು.