Select Your Language

Notifications

webdunia
webdunia
webdunia
webdunia

'ನನ್ನ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಸಾಂಗ್ ಮಾಡಿ ಎಷ್ಟು ವರ್ಷ ಆಯ್ತೋ?'- 'ಕಿಚ್ಚ' ಸುದೀಪ್'

'ನನ್ನ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಸಾಂಗ್ ಮಾಡಿ ಎಷ್ಟು ವರ್ಷ ಆಯ್ತೋ?'- 'ಕಿಚ್ಚ' ಸುದೀಪ್'
ಬೆಂಗಳೂರು , ಮಂಗಳವಾರ, 17 ಆಗಸ್ಟ್ 2021 (15:29 IST)
ಶಿವರಾಜ್ಕುಮಾರ್ ಮತ್ತು 'ಕಿಚ್ಚ' ಸುದೀಪ್ ನಡುವೆ ಬಹಳ ಒಳ್ಳೆಯ ಒಡನಾಟ ಇದೆ. ಒಬ್ಬರು ಸೇರಿ ಜೊತೆಯಾಗಿ 'ದಿ ವಿಲನ್' ಸಿನಿಮಾ ಮಾಡಿದ್ದರು. ಇದೀಗ ಶಿವಣ್ಣ ನಟನೆಯ 124ನೇ ಸಿನಿಮಾ 'ನೀ ಸಿಗೋವರೆಗೂ' ಮುಹೂರ್ತ ಮಂಗಳವಾರ (ಆ.17) ನೆರವೇರಿದೆ. ವಿಶೇಷವೆಂದರೆ, 'ಕಿಚ್ಚ' ಸುದೀಪ್ ಈ ಕಾರ್ಯಕ್ರಮಕ್ಕೆ ಆಗಮಿಸಿ, ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದಾರೆ. ಜೊತೆಗೆ ಶಿವಣ್ಣನ ಕುರಿತು ಪ್ರೀತಿಯಿಂದ ಮಾತನಾಡಿದ್ದಾರೆ. 'ನನ್ನ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಸಾಂಗ್ ಮಾಡಿ ಎಷ್ಟು ವರ್ಷ ಆಯ್ತೋ' ಎಂದು ಹೇಳಿಕೊಂಡಿದ್ದಾರೆ.

124ನೇ ಸಿನಿಮಾದಲ್ಲಿ ನಾನು ತಂದೆ ಪಾತ್ರ ಮಾಡ್ತಾ ಇರ್ತಿನಿ
'ಶಿವಣ್ಣ 124ನೇ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗುತ್ತಿದೆ. ಹೊಸ ಹೊಸ ಹೀರೋಗಳು ಬಂದಂತೆ, ಒಬ್ಬ ವ್ಯಕ್ತಿಗೆ ಅವಕಾಶಗಳು ಕಮ್ಮಿ ಆಗೋದು ಸಾಮಾನ್ಯ. ಆದರೆ, ಒಬ್ಬ ವ್ಯಕ್ತಿಯಲ್ಲಿ ಶ್ರದ್ಧೆ, ಸಿನಿಮಾ ಮೇಲಿನ ಪ್ರೀತಿ ಇದ್ದಾಗ, ಈ ಥರ 124ನೇ ಸಿನಿಮಾ ತನಕ ಬರೋದಕ್ಕೆ ಸಾಧ್ಯ. 124 ಅನ್ನೋದು ಬರೀ ನಂಬರ್ ಅಲ್ಲ, ಅದು ಶಿವಣ್ಣನ ಪ್ರೀತಿ, ಶ್ರದ್ಧೆಯನ್ನು ತೋರಿಸುತ್ತದೆ. ಬಹುಶಃ ನನ್ನ 124ನೇ ಸಿನಿಮಾದಲ್ಲಿ ನಾನು ತಂದೆ ಪಾತ್ರ ಮಾಡ್ತಾ ಇರ್ತಿನಿ ಅನ್ಸತ್ತೆ' ಎಂದು ಸುದೀಪ್ ಹೇಳಿದ್ದಾರೆ.
ಖುಷಿ ಮತ್ತು ಬೇಜಾರು ಎರಡೂ ಇದೆ!
'ಈ ಸಿನಿಮಾದ ಮುಹೂರ್ತದಂದು ನನಗೆ ಖುಷಿ ಮತ್ತು ಬೇಜಾರು ಎರಡೂ ಇದೆ. ನಾನಿಲ್ಲಿ ಇರುವುದಕ್ಕೆ ಖುಷಿ ಇದೆ. ಬೇಜಾರು ಏನೆಂದರೆ, ನಮ್ಮನ್ನು ಹಾಕಿಕೊಂಡು ಲವ್ ಸ್ಟೋರಿ ಮಾಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಶಿವಣ್ಣ ಇವತ್ತಿಗೂ ಅದೇ ಮಾಡ್ತಾ ಇದ್ದಾರೆ. ನನ್ನ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಸಾಂಗ್ ಮಾಡಿ ಎಷ್ಟು ವರ್ಷ ಆಯ್ತೋ? ನಮಗೂ ಇಂತಹ ಸಿನಿಮಾಗಳು ಸಿಗಲಿ' ಎಂದು 'ಕಿಚ್ಚ' ಸುದೀಪ್ ಹೇಳಿದ್ದಾರೆ.
'ಈ ತಂಡವನ್ನು ನೋಡುತ್ತಿದ್ದರೆ, ಬಹಳ ಸೈಲೆಂಟ್ ಆಗಿದೆ ಅನ್ನಿಸುತ್ತದೆ. ಅಲ್ಲಿಯೇ ಜಾಸ್ತಿ ಕೆಲಸ ಇರುತ್ತದೆ. ಒಳ್ಳೆಯ ಸಿನಿಮಾವನ್ನು ಈ ತಂಡ ನೀಡಲಿ. ಇಡೀ ತಂಡಕ್ಕೆ ಶುಭಾಶಯಗಳು. ನಾವು ಸಿನಿಮಾದ ಆರಂಭದ ದಿನಗಳಲ್ಲಿ ಕ್ಲ್ಯಾಪ್ ಮಾಡುವಂತೆ ಶಿವಣ್ಣನಿಗೆ ಕೇಳುತ್ತಿದ್ದೆವು. ಅವರು ಒಪ್ಪಿ, ಬಂದರೆ ಅದೇ ನಮಗೆ ದೊಡ್ಡ ವಿಚಾರ. ನೋಡುತ್ತ ನೋಡುತ್ತ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ನಾನು 25 ವರ್ಷ ಕಂಪ್ಲೀಟ್ ಮಾಡಿದೆ. ಶಿವಣ್ಣ 124ನೇ ಸಿನಿಮಾ ತನಕ ಬಂದಿದ್ದಾರೆ. ಒಳ್ಳೆಯ ಜರ್ನಿ ಇದು' ಎಂದು ನೆನಪು ಮಾಡಿಕೊಂಡಿದ್ದಾರೆ 'ಕಿಚ್ಚ' ಸುದೀಪ್.
ಇನ್ನು, 'ನೀ ಸಿಗೋವರೆಗೂ' ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಮೆಹ್ರೀನ್ ಪಿರ್ಜಾದಾ ನಟಿಸುತ್ತಿದ್ದಾರೆ. ರಾಮ್ ಧುಲಿಪುಡಿ ಇದರ ನಿರ್ದೇಶಕರು.


Share this Story:

Follow Webdunia kannada

ಮುಂದಿನ ಸುದ್ದಿ

ನೀ ಸಿಗೋವರೆಗೂ ಟೈಟಲ್ ನಲ್ಲಿ ಸೆಟ್ಟೇರಿತು ಶಿವರಾಜ್ ಕುಮಾರ್ 124 ನೇ ಸಿನಿಮಾ