Publish Date: Mon, 18 Apr 2022 (19:08 IST)
Updated Date: Mon, 18 Apr 2022 (19:16 IST)
ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕರ್ತವ್ಯ ಮೆರೆದಿದ್ದಾರೆ. ವಿಜಯನಗರದ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ ಶೋಭ ಕರಂದ್ಲಾಜೆ ಅವರು ದಾರಿ ಮಧ್ಯೆ ಅಪಘಾತವಾಗಿರುವುದನ್ನು ಕಂಡ ಶೋಭಾ ಅವರು, ಕೂಡಲೇ ಕಾರು ನಿಲ್ಲಿಸಿ ತಮ್ಮ ಕಾರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬಿಟ್ಟುಕೊಟ್ಟಿದ್ದಾರೆ. ಈ ವೇಳೆ ರೋಗಿಗಳ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವರು, ತಮ್ಮ ವಾಹನದ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು. ಜೊತೆಗೆ ಕಾರ್ಯಕಾರಿಣಿ ನಡೆಯುವ ಸ್ಥಳಕ್ಕೆ, ಸುಮಾರು 5 ಕಿ.ಮೀ ನಷ್ಟು ದೂರ ಬೈಕಿನ ಮೂಲಕ ತೆರಳಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ಘಟನೆ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.