Publish Date: Fri, 10 Dec 2021 (14:08 IST)
Updated Date: Fri, 10 Dec 2021 (14:14 IST)
ವಿಜಯಪುರ : ಜನ್ಮ ನೀಡಿದ ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆಗೆ ಯತ್ನ ನಡೆದು, ಒಂದು ಮಗು ಸಾವಿಗೀಡಾಗಿದ್ದು,
ಮತ್ತೊಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿರುವ ಪ್ರಕರಣ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ನಡೆದಿದೆ. ವಿನೋದ್ ಚೌವ್ಹಾನ್ ಎಂಬಾತನಿಂದ ಕುಕೃತ್ಯ ನಡೆದಿದ್ದು, ಸುಮಿತ್ ಮೃತ ಬಾಲಕ ಎಂದು ತಿಳಿದುಬಂದಿದೆ. ಮತ್ತೋರ್ವ ಬಾಲಕ ಸಂಪತ್ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ.
ತಂದೆ ವಿನೋದ ತನ್ನ ಮೊದಲ ಪತ್ನಿಯ ಮಕ್ಕಳನ್ನು ಹೀಗೆ ಕೊಲೆ ಮಾಡಲು ಮುಂದಾಗಿದ್ದಾನೆ. ಮೊದಲ ಪತ್ನಿ ಮೃತಪಟ್ಟಿದ್ದು ಎರಡನೇ ವಿವಾಹವಾಗಿದ್ದಾನೆ ವಿನೋದ. ಆ ಎರಡನೇ ಪತ್ನಿ ಸವಿತಾ ಕುಮ್ಮಕ್ಕಿನಿಂದ ಹತ್ಯೆಗೆ ಮುಂದಾಗಿದ್ದ ಎಂಬ ಸಂಶಯ ವ್ಯಕ್ತವಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.