Select Your Language

Notifications

webdunia
webdunia
webdunia
webdunia

ಆತ್ಮಹತ್ಯೆಗಾಗಿ ಯಂತ್ರ ಸಿದ್ದಪಡಿಸಿದ ಸ್ವಿಜರ್ಲ್ಯಾಂಡ್! ಏನಿದರ ವಿಶೇಷತೆ?

ಆತ್ಮಹತ್ಯೆಗಾಗಿ ಯಂತ್ರ ಸಿದ್ದಪಡಿಸಿದ ಸ್ವಿಜರ್ಲ್ಯಾಂಡ್! ಏನಿದರ ವಿಶೇಷತೆ?
ಸ್ವಿಜರ್ಲ್ಯಾಂಡ್ , ಬುಧವಾರ, 8 ಡಿಸೆಂಬರ್ 2021 (09:31 IST)
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಮಾನಸಿಕ ಒತ್ತಡ, ಜೀವನಶೈಲಿಯಲ್ಲಿನ ಬದಲಾವಣೆ, ಸಂಸಾರದಲ್ಲಿ ಉಂಟಾಗುವ ವೈಮನಸ್ಸು, ಪರೀಕ್ಷೆಯಲ್ಲಿ ಉತ್ತಮ ಅಂಕ ಬರಲಿಲ್ಲ, ಪ್ರೀತಿಯಲ್ಲಿ ಮೋಸ ಹೀಗೆ ಆತ್ಮಹತ್ಯೆಗೆ ನಾನಾ ಕಾರಣಗಳು ಇವೆ. ಆದರೆ ಕೆಲವೊಮ್ಮೆ ಕಾರಣವೇ ಇಲ್ಲದೆ ಪ್ರಾಣ ಕಳೆದುಕೊಂಡ ಘಟನೆಗಳು ಅನೇಕವು ನಮ್ಮ ಮುಂದೆ ಇದೆ. ಅದರಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ.
ಹೀಗಿದ್ದರೂ ಇದು ಇನ್ನು ಚಾಲ್ತಿಯಲ್ಲಿದೆ. ಆದರೆ ಈಗ ಆತ್ಮಹತ್ಯೆಗಾಗಿಯೇ ವಿಶೇಷ ಯಂತ್ರವೊಂದನ್ನು ಸಿದ್ಧಪಡಿಸಲಾಗಿದೆ. ನಂಬಲು ಇದು ಕೊಂಚ ದೂರದ ಮಾತಾದರೂ ಇದೇ ಸತ್ಯ. ಸ್ವಿಜರ್ಲ್ಯಾಂಡ್ನಲ್ಲಿ ಆತ್ಮಹತ್ಯೆಗಾಗಿಯೇ ಯಂತ್ರವೊಂದನ್ನು ಸಿದ್ಧಪಡಿಸಲಾಗಿದ್ದು, ಇದನ್ನು ಕಾನೂನುಬದ್ಧಗೊಳಿಸಲಾಗಿದೆ.
ಸ್ವಿಜರ್ಲ್ಯಾಂಡ್ನಲ್ಲಿ ಆತ್ಮಹತ್ಯೆ ಪಾಡ್‌ಗಳು ಎಂದು ಕರೆಯಲ್ಪಡುವ ಸಾರ್ಕೊ ಹೆಸರಿನ ಯಂತ್ರವನ್ನು ಪರಿಚಯಿಸಲಾಗಿದೆ. ಶವಪೆಟ್ಟಿಗೆಯನ್ನು ಹೊಲುವ ಈ ಯಂತ್ರ ಯಾವುದೇ ತರಹದ ನೋವು ಉಂಟು ಮಾಡದೆ ಒಂದು ನಿಮಿಷದಲ್ಲಿ ಮರಣ ಹೊಂದುವಂತೆ ಮಾಡುತ್ತದೆ. ಸಾರ್ಕೊ ಯಂತ್ರಗಳು 3ಡಿ ಮುದ್ರಿತ ಕ್ಯಾಪ್ಸುಲ್‌ಗಳಾಗಿವೆ. ಈ ಯಂತ್ರದಲ್ಲಿ ಆಮ್ಲಜನಕದ ಸವಕಳಿಯಿಂದಾಗಿ ಹೈಪೋಕ್ಸಿಯಾ ಮತ್ತು ಹೈಪೋಕ್ಯಾಪ್ನಿಯಾದಿಂದ ಸಾವು ಸಂಭವಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಟೋ ಚಾಲಕನಿಗೆ ಚಾಕು ಇರಿದ ಆ ವ್ಯಕ್ತಿಯಾದ್ರು ಯಾರು?