Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ಧ ಸಿಡಿದೆದ್ದ ರಾಜ್ಯ ನೇಕಾರರ ಸೇವಾ ಸಂಘ

ಸರ್ಕಾರದ ವಿರುದ್ಧ ಸಿಡಿದೆದ್ದ ರಾಜ್ಯ ನೇಕಾರರ ಸೇವಾ ಸಂಘ
bangalore , ಗುರುವಾರ, 13 ಜುಲೈ 2023 (14:48 IST)
ಬಜೆಟ್ ನಲ್ಲಿ ನಮಗೆ ಅನ್ಯಾಯ ಆಗಿದೆ ಅಂತ ಸರ್ಕಾರದ ವಿರುದ್ಧ ನೇಕಾರರು ಗರಂ ಆಗಿದ್ದಾರೆ.ನಗರದ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ತರಕಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಜನರಿಂದ ಧರಣಿ ನಡೆಸಲಾಗಿದೆ.ಬೆಂಗಳೂರಿನ ಸಹಿತ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಹ ಪ್ರತಿಭಟನೆ ನಡೆಸಲಾಗ್ತಿದೆ.10 HP ವಿದ್ಯುತ್ ಸಂಪರ್ಕ ಹೊಂದಿರುವ ನೇಕಾರರಿಗೆ ಕೇವಲ 250 ಯೂನಿಟ್ ಘೋಷಣೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾರೆ.12/06/2023ರಂದು ಸಚಿವರ ಮೂಲಕ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೂ ಸರ್ಕಾರ ನಿರ್ಲಕ್ಷ್ಯ ಮಾಡಿದೆ.ಬಜೆಟ್ ನಲ್ಲಿ ನೇಕಾರ ಸಮುದಾಯವನ್ನು ಕಡೆಗಣಿಸಲಾಗಿದೆ ಅಂತ ನೇಕಾರರು ಆಕ್ರೋಶ ಹೊರಹಾಕಿದ್ದಾರೆ.
 
ನೇಕಾರರ ಬೇಡಿಕೆಗಳು ಏನು..?
 
01. ವೃತ್ತಿಪರ ನೇಕಾರರಿಗೆ ಕಾರ್ಮಿಕ ಮಾದರಿ ಸೌಲಭ್ಯ
 
02. 10HP ಉಚಿತ ವಿದ್ಯುತ್
 
03. ಸಂಪೂರ್ಣ ಸಾಲ ಮನ್ನಾ
 
04. ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡವರಿಗೆ 10 ಲಕ್ಷ ಪರಿಹಾರ
 
05. ನೇರ ಮಾರುಕಟ್ಟೆ ಮಾರಾಟ ಮಳಿಗೆ,ಇತ್ಯಾದಿ

Share this Story:

Follow Webdunia kannada

ಮುಂದಿನ ಸುದ್ದಿ

15 ದಿನದಲ್ಲಿ 30 ಜನರು ಸಸ್ಪೆಂಡ್ : ಮುನಿರತ್ನ