Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ರೌಡಿ ಶೀಟರ್ ನನ್ನ ಅಟ್ಟಾಡಿಸಿ ಹತ್ಯೆ...!

A rowdy sheeter beat me to death in the capital
bangalore , ಬುಧವಾರ, 12 ಜುಲೈ 2023 (21:19 IST)
ನೆನ್ನೆ ರಾತ್ರಿ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಡಿವಾಳ ಠಾಣೆ ರೌಡಿಶೀಟರ್ ಕಪಿಲ್ ನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 2014 ರಲ್ಲಿ ನಡೆದ ನಕ್ರ ಬಾಬುವಿನ ಕೊಲೆ ಪ್ರಕರಣದಲ್ಲಿ ಕಪಿಲ್ ಆರೋಪಿಯಾಗಿದ್ದ. ಡಿಜೆ ಹಳ್ಳಿಯಲ್ಲಿ ಫೈನಾನ್ಸ್ ಹಾಗೂ ರಿಯಲ್ಸ್ ಎಸ್ಟೇಟ್ ವ್ಯವಹಾರ ಮಾಡ್ತಿದ್ದ ಮೃತ ರೌಡಿ ಶೀಟರ್ ತನ್ನದೇ ಗ್ಯಾಂಗ್ ನ್ನ ಕಟ್ಟಿಕೊಂಡಿದ್ದ..ನೆನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ತನ್ನ ಕಾರಿನಲ್ಲಿ ಆರ್ ಟಿ ನಗರದ ಕೆಎಚ್ ಬಿ ರಸ್ತೆಗೆ ಬಂದಿದ್ದ. ಆಗಾಗ ಸ್ನೇಹಿತರನ್ನ ಭೇಟಿಯಾಗಿ ಟೀ ಕುಡಿಯಲು ಬರ್ತಿದ್ದ ಕಪಿಲ್, ಅದೇ ರೀತಿ ನೆನ್ನೆ ರಾತ್ರಿ ಕೂಡ ಟೀ ಕುಡಿಯಲು ಬಂದಿದ್ದ. ಈ ವೇಳೆ ಎರಡು ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು, ಹೆಲ್ಮೆಟ್ ಹಾಗೂ ಪುಲ್ ಓವರ್ ಧರಿಸಿದ್ರು..ಬೈಕ್ ವೊಂದರ ನಂಬರ್ ಪ್ಲೇಟ್ ಮೇಲೆ ಅನುಮಾನ ಪಟ್ಟಿದ್ದು, ಸ್ನೇಹಿತನನ್ನ ಕಪಿಲ್ ಕಳುಹಿಸಿದ್ದ..ಈ ಮಧ್ಯೆ ಸ್ನೇಹಿತ ಹೋಗುತ್ತಿದ್ದಂತೆ ಕಪಿಲ್ ಮೇಲೆ ಅಟ್ಯಾಕ್ ಮಾಡಿದ ಗ್ಯಾಂಗ್, ಸುಮಾರು ನೂರು ಮೀಟರ್ ಅಟ್ಟಾಡಿಸಿಕೊಂಡು ಮಾರಣಾಂತಿಕ ಹಲ್ಲೆ ಮಾಡಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸುವಾಗಲೇ ಕಪಿಲ್ ಸಾವನ್ನಪ್ಪಿದ್ದಾನೆ.
 ಸಿಟಿ ಮಾರ್ಕೆಟ್, ಹೆಬ್ಬಾಳ, ಮಡಿವಾಳ ಸೇರಿ ಹಲವು ಠಾಣೆಗಳಲ್ಲಿ ಕಪಿಲ್ ಮೇಲೆ ಕೇಸ್ ಗಳು ದಾಖಲಾಗಿದೆ. ವಿಲ್ಸನ್ ಗಾರ್ಡನ್ ಶಿಷ್ಯನಾಗಿದ್ದ ಕಪಿಲ್ ಕೊಲೆಯನ್ನ ರೌಡಿ ಶೀಟರ್ ಮಹೇಶ್ ಏನಾದ್ರು ಮಾಡಿಸಿದ್ನಾ ಎಂಬ ಅನುಮಾನ ಹಿನ್ನಲೆ ತನಿಖೆ ನಡೆಸಲಾಗ್ತಿದೆ. ಸದ್ಯ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚನೆ ಮಾಡಿದ್ದು, ಓರ್ವನನ್ನ ವಶಕ್ಕೆ ಪಡೆಯಲಾಗಿದೆ. ಅದೇನೇ ಇರಲಿ ಮತ್ತೊಬ್ಬನನ್ನ ಮಚ್ಚಿಡಿದು ನೆತ್ತರು ಹರಿಸಿದ್ದವ ಅದೇ ನೆತ್ತರಿನಲ್ಲಿ ಪ್ರಾಣಬಿಟ್ಟ.

Share this Story:

Follow Webdunia kannada

ಮುಂದಿನ ಸುದ್ದಿ

ಚೈನಿಸ್ ಲೋನ್ ಆ್ಯಪ್ ಕಿರುಕುಳಕ್ಕೆ ವಿದ್ಯಾರ್ಥಿಯೊರ್ವ ಬಲಿ