Publish Date: Thu, 13 Jul 2023 (13:34 IST)
Updated Date: Thu, 13 Jul 2023 (13:37 IST)
ಕೋಲಾರ : ಯರಗೋಳ ಡ್ಯಾಂ ಯೋಜನೆಯಲ್ಲಿ ಕೋಟ್ಯಂತರ ರೂ. ಅಕ್ರಮವಾಗಿದ್ದು ಯೋಜನೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ.
ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಈ ಆರೋಪ ಮಾಡಿದ್ದು, ಸೂಕ್ತ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಬಂಗಾರಪೇಟೆ ತಾಲೂಕಿನ ಯರಗೋಳ ಗ್ರಾಮದ ಬಳಿ ಈ ಡ್ಯಾಂ ನಿರ್ಮಾಣವಾಗಿದೆ. ಪೈಪ್ ಲೈನ್ ಸೇರಿದಂತೆ ನೀರು ಸರಬರಾಜು ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಈ ಕಾಮಗಾರಿ ನಡೆಸಿತ್ತು.
ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಇನ್ನೂ ನೀರು ಪೂರೈಕೆಗೆ 79 ಕೋಟಿ ರೂ. ಹಣ ಮಂಜೂರು ಮಾಡಲಾಗಿದೆ. ಒಟ್ಟು 249 ಕೋಟಿ ರೂ. ಯೋಜನೆಗೆ ಹಣ ಮಂಜೂರು ಪ್ರಕ್ರಿಯೆ ನಡೆದಿದೆ. ಆದರೆ ಡ್ಯಾಂ ನಿರ್ಮಾಣ, ಪೈಪ್ ಲೈನ್ ಅಳವಡಿಕೆ, ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲಿ ನಿಗದಿಗಿಂತಲೂ ಹೆಚ್ಚುವರಿಯಾಗಿ ಹಣ ಮಂಜೂರು ಮಾಡಿರುವ ಆರೋಪವನ್ನ ಮಾಡಲಾಗಿದೆ.