ಬೆಂಗಳೂರು: ತಡ ರಾತ್ರಿ ನಗರದಲ್ಲಿ ಉದ್ಯಮಿ ಮಗನ ಪೋರ್ಷ್ ಕಾರನ್ನು ಬೇಕಾ ಬಿಟ್ಟಿ ಚಲಾಯಿಸಿ ಅಪಘಾತ ಎಸಗಿದ್ದ ಪ್ರಕರಣದಲ್ಲಿ ತನಿಖೆ ವೇಳೆ ಸ್ಫೋಟಕ ಸತ್ಯ ಬೆಳಕಿಗೆ ಬಂದಿದ್ದು ಡ್ರಿಂಕ್ & ಡ್ರೈವ್ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಪರೀಕ್ಷೆ ವೇಳೆ ಉದ್ಯಮಿ ಜುವೇರ್ ಮದ್ಯಪಾನ ಮಾಡಿದ್ದು ದೃಢಪಟ್ಟಿರುವುದರಿಂದ. ಪ್ರಕರಣದ ಸಂಬಂಧ ಹಲಸೂರು ಟ್ರಾಫಿಕ್ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ ಎಂದಿದ್ದಾರೆ.
ಡಾಕ್ಯುಮೆಂಟ್ಸ್ ಪಕ್ಕಾ:
ತನಿಖೆಯ ವೇಳೆ ಉದ್ಯಮಿ ಮಗ ಜುವೇರ್ ಬಳಿ ಎಲ್ಲ ದಾಖಲೆಗಳಿದ್ದವು. ಆರ್.ಸಿ,ಡಿ.ಎಲ್,ಇನ್ಸುರನ್ಸ್ ಸೇರಿದಂತೆ ಎಲ್ಲವೂ ಜಾಲ್ತಿಯಲ್ಲಿರುವುದು ದೃಢಪಟ್ಟಿದೆ ಆದರೆ, ಡ್ರಂಕ್ & ಡ್ರೈವ್ ಮಾಡಿ ಕಾರು ಚಲಾಯಿಸಿದ್ದ ಜುವೇರ್ ಅಪರಾಧ ಎಸಗಿದ್ದಾನೆ. ಈ ಸಂಬಂಧ ವೈದ್ಯಕೀಯ ಪರೀಕ್ಷಾ ವರದಿ ಇದೀಗ ಪಡೆದಿದ್ದೇವೆ ಮುಂದಿನ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ಹಲಸೂರು ಪೊಲೀಸರು ಮಾಹಿತಿ ನೀಡಿದ್ದಾರೆ.