Publish Date: Sun, 26 Sep 2021 (17:16 IST)
Updated Date: Sun, 26 Sep 2021 (17:27 IST)
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನನ್ನ ಹೆಸರು ಕೆದುಕಲಿಲ್ಲ ಎಂದ್ರೆ ನಿದ್ದೆ ಬರುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಬಗ್ಗೆ ಸಿದ್ದರಾಮಯ್ಯ ಸದನದ ಹೊರಗಡೆ ಮಾತನಾಡುತ್ತಾರೆ. ಸದನದ ಒಳಗೆ ಮಾತನಾಡುವುದಿಲ್ಲ. ಕಲಾಪ ನಡೆಯುವ ಸಮಯದಲ್ಲಿ ನಿಯಮ69ರಡಿ ಈ ವಿಷಯ ಚರ್ಚೆಗೆ ತರಬೇಕಿತ್ತು. ಜನರಿಗೆ ಸತ್ಯ ಗೊತ್ತಾಗುತ್ತಿತ್ತು. ಅವರಿಗೆ ಜಾತಿ ಜನಗಣತಿ ವಿಚಾರ ಪ್ರಚಾರಕ್ಕೆ ಮಾತ್ರ ಬೇಕಾಗಿದೆ. ಹಾಗಾಗಿ ನನ್ನ ಹೆಸರು ಪ್ರತಿನಿತ್ಯ ಕೆದಕುತ್ತಾರೆ. ನನ್ನ ಹೆಸರು ಕೆದುಕಲಿಲ್ಲ ಅಂದ್ರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದು ಸಿದ್ದರಾಮಯ್ಯಗೆ ಹೆಚ್.ಡಿ.ಕುಮಾರಸ್ವಾಮಿ ತೀರುಗೇಟು ನೀಡಿದ್ರು.