Select Your Language

Notifications

webdunia
webdunia
webdunia
webdunia

ಭಾರತ ಬಂದ್ ಗೆ ಸರ್ಕಾರದ ಬೆಂಬಲ: ಬಸ್ ಸಂಚಾರ ಸ್ಥಗಿತ

ಭಾರತ ಬಂದ್ ಗೆ ಸರ್ಕಾರದ ಬೆಂಬಲ: ಬಸ್ ಸಂಚಾರ ಸ್ಥಗಿತ
ವಿಶಾಖಪಟ್ಟಣಂ , ಭಾನುವಾರ, 26 ಸೆಪ್ಟಂಬರ್ 2021 (15:04 IST)
ವಿಶಾಖಪಟ್ಟಣಂ : ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಯೂನಿಯನ್ ಕರೆ ನೀಡಿರುವ ಭಾರತ ಬಂದ್ ಗೆ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾಳಿನ ಭಾರತ್ ಬಂದ್ ಗೆ ಆಂಧ್ರಪ್ರದೇಶದಲ್ಲಿ ತೆಲುಗುದೇಶಂ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಬೆಂಬಲ ನೀಡಿದ್ದು, YSR ಪಕ್ಷದ ನಾಯಕ ಜಗನ್ ಕೂಡ ಬೆಂಬಲ ನೀಡಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 26 ರಂದು ಭಾನುವಾರ ಮಧ್ಯರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೆ ರಾಜ್ಯದ್ಯಂತ ಆಂಧ್ರಪ್ರದೇಶ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಬಂದ್ ಗೆ ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ಬೆಂಬಲ ವ್ಯಕ್ತವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಜಿಟಲ್ ಓದುಗರಿಗೆ ಭಾರಿ ಭರವಸೆ ಕೊಟ್ಟ ಮುಖ್ಯಮಂತ್ರಿ ಬೊಮ್ಮಾಯಿ!