Publish Date: Tue, 30 Apr 2019 (17:19 IST)
Updated Date: Tue, 30 Apr 2019 (17:25 IST)
ಕುಡಿತದ ಮತ್ತಿನಲ್ಲಿ ಹಾವು ಹಿಡಿಯಲು ಹೋದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದ ವಿಶ್ವೇಶ್ವರಪುರದಲ್ಲಿ ಈ ಘಟನೆ ನಡೆದಿದೆ.
ಬಡಾವಣೆಯ ನಿವಾಸಿ ಗೋವಿಂದರಾಜು (35) ಹಾವಿನ ಕಡಿತಕ್ಕೊಳಗಾದವನಾಗಿದ್ದಾನೆ. ಪೇಂಟರ್ ಕೆಲಸ ಮಾಡುವ ಗೋವಿಂದರಾಜು, ರಾತ್ರಿ ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋಗಿದ್ದಾರೆ.
ಆಗ ಹಾವಿನಿಂದ ಕೈಬೆರಳಿಗೆ ಕಚ್ಚಿಸಿಕೊಂಡಿದ್ದಾರೆ. ಪಟ್ಟಣದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
Jagadeesh
Publish Date: Tue, 30 Apr 2019 (17:19 IST)
Updated Date: Tue, 30 Apr 2019 (17:25 IST)