Select Your Language

Notifications

webdunia
webdunia
webdunia
webdunia

ಸಹೋದರಿ, ದೊಡ್ಡಮ್ಮಳ ಮೇಲೆ ಆ ಕೆಲಸ ಮಾಡಿದ ಬುಲೆಟ್ ನಾಗ

ಸಹೋದರಿ, ದೊಡ್ಡಮ್ಮಳ ಮೇಲೆ ಆ ಕೆಲಸ ಮಾಡಿದ ಬುಲೆಟ್ ನಾಗ
ರಾಮನಗರ , ಗುರುವಾರ, 5 ಸೆಪ್ಟಂಬರ್ 2019 (18:42 IST)
ಆ ಯುವಕನಿಗೆ ಪಿತ್ತ ನೆತ್ತಿಗೇರಿದ್ದರೆ ಯಾರು ಹೇಳಿದ ಮಾತನ್ನೂ ಕೇಳುತ್ತಿರಲಿಲ್ಲ. ಅಂಥ ಹುಡುಗನೊಬ್ಬ ತನ್ನ ದೊಡ್ಡಮ್ಮ ಹಾಗೂ ಆಕೆಯ ಮಗಳ ಮೇಲೆ ಆ ಕೆಲಸ ಮಾಡಿದ್ದಾನೆ.

ದೊಡ್ಡಮ್ಮ ಹಾಗೂ ಆಕೆಯ ಮಗಳ ಮೇಲೆ ಸಿಟ್ಟಾಗಿದ್ದ ಬುಲೆಟ್ ನಾಗ ರೊಚ್ಚಿಗೆದ್ದು ಕೊಚ್ಚಿ ಕೊಲೆ ಮಾಡಿದ್ದಾನೆ.

ನಾಗರಾಜ್ ಅಲಿಯಾಸ್ ಬುಲೆಟ್ ನಾಗ ಹಾಗೂ ಮಂಗಮ್ಮಳ ಮನೆಗಳ ನಡುವೆ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಜಮೀನು ವಿಷಯಕ್ಕೂ ಆಗಾಗ್ಗೆ ಕಿರಿಕ್ ಆಗುತ್ತಿತ್ತು.

ವಾಗ್ವಾದದ ನಡುವೆ ಕೋಪಗೊಂಡ ಬುಲೆಟ್ ನಾಗ ಕೈಗೆ ಮಚ್ಚು ಎತ್ತಿಕೊಂಡವನೇ ತನ್ನ ದೊಡ್ಡಮ್ಮಳಾದ ಮಂಗಮ್ಮ ಮತ್ತು ಅವಳ ಮಗಳು ನಾಗರತ್ನಾಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಕನಕಪುರ ತಾಲೂಕಿನ ಸೊಂಟೇನಹಳ್ಳಿಯಲ್ಲಿ ಈ ಕೊಲೆ ಘಟನೆ ನಡೆದಿದ್ದು, ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ದಪ್ಪ ಫೋಟೋ ವೈರಲ್