Select Your Language

Notifications

webdunia
webdunia
webdunia
webdunia

BBMP ಗುಂಡಿಗೆ ಬಿದ್ದ ಗಾಯಕ

BBMP ಗುಂಡಿಗೆ ಬಿದ್ದ ಗಾಯಕ
bangalore , ಬುಧವಾರ, 11 ಮೇ 2022 (20:48 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಡ್ರೈನ್‌ಹೋಲ್‌ ಕಾಣದೆ ಖ್ಯಾತ ಗಾಯಕ ಅಜಯ್‌ ವಾರಿಯರ್‌ ಗುಂಡಿಯೊಳಗೆ ಬಿದ್ದ ಪರಿಣಾಮ ಕಾಲಿಗೆ ತೀವ್ರ ಏಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ..ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಅಜಯ್‌, ನಿನ್ನೆ ನಗರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನನ್ನ ಮಗಳ ಜನ್ಮದಿನದ ಅಂಗವಾಗಿ ಕೇರಳಕ್ಕೆ ಹೋಗಲು ರೈಲ್ವೆ ನಿಲ್ದಾಣದತ್ತ ಹೊರಟೆ. ಮೆಟ್ರೋ ನಿಲ್ದಾಣವನ್ನು ಸಮೀಸುತ್ತಿದ್ದಂತೆ ಮುಖ್ಯ ರಸ್ತೆಯಲ್ಲಿ ನೀರು ನಿಂತಿದ್ದು, ಫುಟ್‌ಪಾತ್‌ ಏರಿದೆ. ಕೆಲವೇ ಹೆಜ್ಜೆ ನಡೆದ ನಂತರ ಪುಟ್‌ಪಾತ್‌ನಲ್ಲಿನ ದೊಡ್ಡ ಗುಂಡಿಯೊಳಗೆ ಬಿದ್ದುಬಿಟ್ಟೆ.. ಗುಂಡಿ ಎಂದು ಗೊತ್ತಾಗುತ್ತಿದ್ದಂತೆ ಚರಂಡಿ ಒಳಗೆ ಬಿದ್ದೆ, ನೀರು ನನ್ನ ಎದೆಯ ಮಟ್ಟದವರೆಗೂ ಇತ್ತು.. ದೇವರ ದಯೆಯಿಂದ ನಾನು ಬದುಕಿ ಉಳಿಯಲು ಸಾಧ್ಯವಾಯ್ತು..ನಗರದ ಅವ್ಯವಸ್ಥೆ ಕಂಡು ನನಗೆ ತೀವ್ರ ನೋವುಂಟು ಮಾಡಿದೆ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ