Select Your Language

Notifications

webdunia
webdunia
webdunia
webdunia

ಬಡವರ ಮನೆ ಶ್ರೀಮಂತರ ಪಾಲು; RTI ನಿಂದ ಹೊರಬಿತ್ತು ಭಯಂಕರ ಸತ್ಯ

ಬಡವರ ಮನೆ ಶ್ರೀಮಂತರ ಪಾಲು; RTI ನಿಂದ ಹೊರಬಿತ್ತು ಭಯಂಕರ ಸತ್ಯ
ಬೆಳಗಾವಿ , ಬುಧವಾರ, 3 ಜುಲೈ 2019 (17:15 IST)
ರಾಜ್ಯದಲ್ಲಿ ವಸತಿ ರಹಿತ ಕುಟುಂಬಗಳಿಗೆ ಸೇರಬೇಕಾದ ಮನೆಗಳು ಪ್ರಭಾವಿ ನಾಯಕರ ಪಾಲಾಗುತ್ತಿವೆ. ಹೀಗಂತ ಮತ್ತೆ ಆರೋಪಗಳು ಕೇಳಿಬಂದಿವೆ.

ಸರಕಾರದಿಂದ ಬಡವರಿಗೆ ಸೇರಬೇಕಾದ ಮನೆ ಉಳ್ಳವರ ಪಾಲಾಗುತ್ತಿವೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಬಡತನ ರೇಖೆಗಳಿಗಿಂತ ಕೆಳಗಿರುವ ವಸತಿ ರಹಿತ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆ ಮಾಡಿದ ರಾಜೀವ ಗಾಂಧಿ ವಸತಿ ನಿಗಮದಿಂದ 2000 ದಿಂದ 2001 ಹಾಗೂ 2017-18 ರವರೆಗೆ 39,34,517 ಮನೆಗಳು ಹಂಚಿಕೆಯಾಗಿವೆ. ಸರಕಾರದ ಬೊಕ್ಕಸದಿಂದ 21682 ಕೋಟಿ 89 ಲಕ್ಷ 90 ಸಾವಿರ ರೂ.ಗಳು ವೆಚ್ಚವಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬೆಳಕಿಗೆ ಬಂದಿದೆ.

ಅರ್ಹ ಹಾಗೂ ಯೋಗ್ಯ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲು ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಸಮಿತಿ ಇರುತ್ತದೆ. ಆದರೆ ಇತ್ತಿಚೀನ ವರ್ಷಗಳಲ್ಲಿ ಪಾರದರ್ಶಕತೆಯಿಂದ ಮನೆಗಳನ್ನು ಹಂಚಿಕೆ ಮಾಡದೆ ಇರುವುದರಿಂದ ಸರಕಾರದ ಯೋಜನೆಗಳು ಶ್ರೀಮಂತರ ಹಾಗೂ ಪ್ರಭಾವಿ ರಾಜಕಾರಣಿಗಳ ಸೇರುತ್ತಿವೆ.

ಸರಕಾರ ಕಡು ಬಡವರಿಗೆ ಮನೆಗಳು ದೊರೆಯುವಂತೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಭೀಮಪ್ಪಾ ಗಡಾದ  ಒತ್ತಾಯಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ತೂಕದ ಶಾರ್ಕ್ ಮೀನನ್ನು ಕ್ರೇನ್ ನಿಂದ ಎತ್ತಿದ್ಯಾಕೆ?