Publish Date: Sat, 21 Dec 2019 (18:45 IST)
Updated Date: Sat, 21 Dec 2019 (18:47 IST)
ಬಿಜೆಪಿಯ ನೂತನ ಶಾಸಕರು ಇದೇ ಖಾತೆ ಸಚಿವರಾಗಲಿದ್ದಾರೆ. ಹೀಗಂತ ಗುರೂಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಕೆ.ಆರ್.ಪೇಟೆ ಶಾಸಕ ನಾರಾಯಣಗೌಡರು ಸಧ್ಯದಲ್ಲಿಯೇ ಕೃಷಿ ಅಥವಾ ನೀರಾವರಿ ಸಚಿವರಾಗ್ತೀರಿ. ನಿಮ್ಮ ಶ್ರಮ, ಕಷ್ಟದ ದಿನಗಳು ದೂರಾಗಿವೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗ್ತೀರಿ. ಹೀಗಂತ ಅವಧೂತ ಅರ್ಜುನ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಮೈಸೂರಿನ ಸೋನಾರ್ ರಸ್ತೆಯಲ್ಲಿರುವ ಅವಧೂತ ಅರ್ಜುನ್ ಗುರೂಜಿ ಅವರ ಮನೆಗೆ ಶಾಸಕ ನಾರಾಯಣಗೌಡ ಭೇಟಿ ನೀಡಿದ್ರು.
ಉಪ ಚುನಾವಣೆಯ ಮುಂಚೆಯೇ ನಾರಾಯಣಗೌಡರು ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದರು ಅರ್ಜುನ ಅವಧೂತ ಗುರೂಜಿಗಳು.
ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಾಸಕ ನಾರಾಯಣಗೌಡರು ತಮ್ಮ ಪತ್ನಿ ದೇವಕಿ ಸಮೇತವಾಗಿ ಗುರುಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.
ಕೃಷಿ ಅಥವಾ ಸಣ್ಣ ನೀರಾವರಿ ಖಾತೆಯ ಜೊತೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗುವ ಯೋಗವಿದೆ ಅಂತ ಗುರೂಜಿ ಭವಿಷ್ಯ ತಿಳಿಸಿದ್ದಾರೆ.