Publish Date: Thu, 05 Dec 2019 (22:56 IST)
Updated Date: Thu, 05 Dec 2019 (22:57 IST)
ರಾಜ್ಯದ ಉಪ ಚುನಾವಣೆ ಕುರಿತು ಡಿಸಿಎಂ ಭರ್ಜರಿಯಾಗಿ ಭವಿಷ್ಯ ನುಡಿದಿದ್ದಾರೆ.
ಲಕ್ಷ್ಮಣ ಸವದಿ ಸ್ವಗ್ರಾಮ ಅಥಣಿಯ ನಾಗನೂರು ಪಿ ಕೆ ಗ್ರಾಮದ ಮತಗಟ್ಟೆ ನಂ 204 ರಲ್ಲಿ ಮತದಾನ ಮಾಡಿದರು.
ಇನ್ನು ಡಿಸಿಎಂ ಗೆ ಮಗ ಚಿದಾನಂದ ಸವದಿ ಸಾಥ್ ನೀಡಿದರು. ಮತದಾನದ ವೇಳೆ ಮತಗಟ್ಟೆಯ ದಾಖಲಾತಿಯಲ್ಲಿ ಡಿಸಿಎಂ ಲಕ್ಷ್ಮಣ ಉಲ್ಟಾ ಸಹಿ ಮಾಡಿದರು.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ಅಥಣಿ ಹಾಗೂ ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ.
ಕುಮಠಳ್ಳಿ 30 ಸಾವಿರ ಅಧಿಕ ಹಾಗೂ ಶ್ರೀಮಂತ ಪಾಟೀಲ 17 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆ ಅಂತ ಹೇಳಿದ್ರು.