Publish Date: Sat, 21 May 2022 (18:36 IST)
Updated Date: Sat, 21 May 2022 (18:39 IST)
ದಾವಣಗೆರೆಯಲ್ಲಿ ಸತತ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ..ಜಿಲ್ಲೆಯ ವಡ್ಡಿನಹಳ್ಳಿಯಲ್ಲಿ ಧಾರಾಕಾರ ಮಳೆಯಿಂದಾಗಿ ಟ್ರ್ಯಾಕ್ಟರ್ ನೀರಿನಲ್ಲಿ ಮುಳುಗಿದೆ. ಕೂದಲೆಳೆ ಅಂತರದಲ್ಲಿ ಟ್ರ್ಯಾಕ್ಟರ್ ಚಾಲಕ ಪಾರಾರಿಯಾಗಿದ್ದಾನೆ..ಇತ್ತ, ರಸ್ತೆ ಮಧ್ಯದಲ್ಲೇ ಆಟೋ, ಬೈಕ್ ಸಿಲುಕಿ ಹೊರ ಬರಲಾಗದೇ ಸವಾರರು ಪರದಾಡಿದ್ದಾರೆ. ನಗರದ ಹಳೇ ಕುಂದುವಾಡದ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಬಳಿಕ ನೀರಿನಿಂದ ತುಂಬಿದ್ದ ರಸ್ತೆ ಮಧ್ಯದಲ್ಲೆ ಸಿಲುಕಿಕೊಂಡ ಬೈಕ್ & ಆಟೋವನ್ನು ಸ್ಥಳೀಯರು ಮುಂಜಾಗ್ರತೆಯಿಂದ ಹೊರ ತೆಗೆದಿದ್ದಾರೆ.