Select Your Language

Notifications

webdunia
webdunia
webdunia
webdunia

ಜನೌಷಧಿ ಗುಣಮಟ್ಟದಿಂದ ಕೂಡಿಲ್ವಾ?: ಬಿಜೆಪಿ ಸಂಸದ ಹೇಳಿದ್ದೇನು?

ಜನೌಷಧಿ ಗುಣಮಟ್ಟದಿಂದ ಕೂಡಿಲ್ವಾ?: ಬಿಜೆಪಿ ಸಂಸದ ಹೇಳಿದ್ದೇನು?
ಕಲಬುರಗಿ , ಭಾನುವಾರ, 8 ಮಾರ್ಚ್ 2020 (18:50 IST)
ಜನೌಷಧಿ ಗುಣಮಟ್ಟದಿಂದ ಕೂಡಿಲ್ಲ ಅಂತ ಕೆಲವರು ವದಂತಿಗಳನ್ನು ಹರಡಿಸುತ್ತಿವುದರ ವಿರುದ್ಧ ಬಿಜೆಪಿ ಸಂಸದ ಕಿಡಿಕಾರಿದ್ದಾರೆ.

ಜನೌಷಧಿ ಮಾತ್ರೆಗಳು ಗುಣಮಟ್ಟದಿಂದ ಕೂಡಿದೆ. ಕೆಲವರು ಅನಾವಶ್ಯಕವಾಗಿ ಕಡಿಮೆ ದರದ ಜನೌಷಧಿ ಮಾತ್ರೆಗಳು ಗುಣಮಟ್ಟವಿಲ್ಲವೆಂದು ಜನರನ್ನು ತಪ್ಪು ದಾರಿಗೆ ಎಳೆಯಲು ಬಯಸುತ್ತಿದ್ದಾರೆ. ಇದ್ಯಾವುದಕ್ಕೂ ಕಿವಿಗೊಡಬೇಡಿ ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.

ಜನೌಷಧಿ ಮಾತ್ರೆಗಳು ಜಿ.ಎಂ.ಪಿ. ದೃಢೀಕೃತ ಮಾತ್ರೆಗಳಾಗಿದ್ದು, ಶೇ.100ರಷ್ಟು ಗುಣಮಟ್ಟದಿಂದ ಕೂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಪೋಷಣ ಅಭಿಯಾನ ಮತ್ತು ಜನೌಷಧಿ ದಿವಸ್ ನಾಲ್ಕನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಬಡಜನರ ಪಾಲಿಗೆ ಸಂಜೀವಿನಿಯಾಗಿರುವ ಜನೌಷಧಿ ಕೇಂದ್ರಗಳು ಪ್ರತಿ ಸ್ಲಮ್, ಕಾಲೋನಿ, ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುವಂತಾಗಲಿ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಅವರು ಅಭಿಪ್ರಾಪಟ್ಟರು.

ದುಡಿದು ತಿನ್ನುವ ಬಡಜನರು ಮಾರಣಾಂತಿಕ ಕಾಯಿಲೆಗೆ ತುತ್ತಾದರೆ ಆಸ್ಪತ್ರೆ, ಔಷಧಿ ಅಂತ ಅಲೆಯಬೇಕಾಗುತ್ತದೆ. ಮೊದಲೇ ಆರ್ಥಿಕವಾಗಿ ಕುಗ್ಗಿರುವವರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಸರ್ವರಿಗೂ ಸಿಗಬೇಕು ಎಂಬ ಸದುದ್ದೇಶದಿಂದ ಕೇಂದ್ರ ಸರ್ಕಾರವು ಜನೌಷಧಿ ಕೇಂದ್ರಗಳು ತೆರೆದಿದ್ದು, ಇಲ್ಲಿ ಶೇ.50 ರಿಂದ 75ರ ವರೆಗೆ ಕಡಿಮೆ ದರದಲ್ಲಿ ಔಷಧಿಗಳು ಸಿಗುತ್ತವೆ ಎಂದರು.

ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಆರೋಗ್ಯ ದೃಷ್ಠಿಯಿಂದ ಜನೌಷಧಿ ಕೇಂದ್ರಗಳಲ್ಲಿ ನ್ಯಾಪಕಿನ್ ಪ್ಯಾಡ್ 1 ರೂ. ಗಳಿಗೆ ನೀಡಲಾಗುತ್ತಿದೆ. ಶಾಲಾ-ಕಾಲೇಜು, ಗ್ರಾಮಗಳಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತೆಯರು ಇದರ ಬಗ್ಗೆ ಆಂದೋಲನದ ಮಾದರಿಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಕತಾರ, ನಾರ್ವೆಯಿಂದ ಬಂದವರಲ್ಲಿ ಕೊರೊನಾ ವೈರಸ್ ಇಲ್ಲ