Select Your Language

Notifications

webdunia
webdunia
webdunia
webdunia

ಫುಟ್ ಪಾತ್ ವ್ಯಾಪಾರಿಗಳ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ-ಡಿಸಿಎಂ ಡಿ.ಕೆ.ಶಿವಕುಮಾರ್

DK Shivakumar

geetha

bangalore , ಶನಿವಾರ, 13 ಜನವರಿ 2024 (16:42 IST)
ಬೆಂಗಳೂರು-ಫುಟ್ ಪಾತ್ ವ್ಯಾಪಾರಿಗಳ ಸಮಸ್ಯೆ ನನ್ನ ಗಮನದಲ್ಲೂ ಇದೆ.ಎರಡು ಮೂರು ಬಾರಿ ನನ್ನನ್ನೂ ಭೇಟಿ‌ ಮಾಡಿದ್ದರು.ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಸರಿಪಡಿಸಬೇಕು ಫುಟ್ ಪಾತ್ ಗಳು ಸಹಾ ಜನರ ಓಡಾಟಕ್ಕೆ ಮುಜ್ತವಾಗಿರಬೇಕು.ಹೈ ಕೋರ್ಟ್ ಆರ್ಡರ್ ಇದೆ ಅದನ್ನ ಪಾಲಿಸಬೇಕು.

ಫುಟ್ ಪಾತ್ ವ್ಯಾಪಾರಿಗಳು ಲೈಸೆನ್ಸ್ ಪಡೆದು ಜನರ ಓಡಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ತಳ್ಳುಗಾಡಿ ಎಲ್ಲಾ ಹಾಕಿಕೊಂಡು ವ್ಯಾಪಾರ ಮಾಡಿದರೆ ತೊಂದರೆ ಇಲ್ಲ.ಫುಟ್ ಪಾತ್ ಓಡಾಟಕ್ಕೆ ತೊಂದರೆ ಆದಾಗ ನಾಗರಿಕರಿಂದ ನಮಗೂ ದೂರುಗಳು ಬಂದಿವೆ.ಕೋರ್ಟ್ ನಿರ್ದೆಶನ ಸಹಾ ಇದೆ.ಅದನ್ನ ನಾವು ಪಾಲಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ಪ್ರಿಯಾಂಕ ಖರ್ಗೆ ಕರ್ನಾಟಕ ಅಥವಾ ತೆಲಂಗಾಣದಲ್ಲಿ ಸ್ಪರ್ಧೆ ವಿಚಾರವಾಗಿ ಅದರ ಬಗ್ಗೆ ನನಗೆ‌ ಮಾಹಿತಿ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಅವರ ನಾಟಕ, ಬೂಟಾಟಿಕೆ ಯಾರೂ ನಂಬಲ್ಲ-ಮಾಜಿ ಸಚಿವ ಅಶ್ವಥ್ ನಾರಾಯಣ್