Select Your Language

Notifications

webdunia
webdunia
webdunia
webdunia

ಭ್ರಷ್ಟಾಚಾರದಲ್ಲಿ ‌ನಾವೇ ನಂ.1 ಅಂತ ಜಾಹೀರಾತು ಕೊಡಿ

CT ravi

geetha

bangalore , ಶುಕ್ರವಾರ, 12 ಜನವರಿ 2024 (21:16 IST)
ಬೆಂಗಳೂರು-ಜಾಹೀರಾತು‌ ಕೊಡ್ತಿರೋದ್ರಿಂದ ಮಾಧ್ಯಮಗಳ ಸಹಕಾರ ಸಿಗ್ತಿದೆ. ಐದನೇ‌ ಗ್ಯಾರಂಟಿ ಯುವ ನಿಧಿ‌ ಕೊಡ್ತಿದ್ದೀರಿ ಅಷ್ಟೇ ಅಂತಾ ಮಾಜಿ ಸಚಿವ ಸಿ.ಟಿ.ರವಿ‌ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅದು‌ ಎಲ್ಲಾ ನಿರುದ್ಯೋಗಿಗಳಿಗಲ್ಲ. ನುಡಿದಂತೆ‌ ನಡೆದಿದ್ದೇವೆ ಅನ್ನೋದು‌ ಈಡೇರಿಲ್ಲ. ಸ್ಟಾಂಪ್‌ ಡ್ಯೂಟಿ,‌ ಅಬಕಾರಿ ತೆರಿಗೆ,‌ ಪೆಟ್ರೋಲ್‌, ಡೀಸೆಲ್‌ ಮೇಲೆ ಏರಿಕೆಯಾಗಿದೆ. ಇನ್ನು ವಿದ್ಯುತ್ ಬಿಲ್‌ ಏರಿಕೆ‌ ಮಾಡಿದ್ದು 7ನೇ ಗ್ಯಾರಂಟಿ. ನೀವು‌ ಜಾತಿ ಜಾತಿ‌ ನಡುವೆ ಎತ್ತಿಕಟ್ಟುವ ಕೆಲಸ ಮಾಡ್ತಿದ್ದೀರಿ, ‌ಇದು 9ನೇ‌ ಗ್ಯಾರಂಟಿಯಾಗಿದೆ. ಮಾಲೂರು ಶಾಸಕ‌ ಹರಾಜು‌ ಹಾಕಿ‌ 30 ಲಕ್ಷಕ್ಕೆ ಹುದ್ದೆ ಮಾರಿದ್ದಾರೆ‌, ಇದು 10ನೇ ಗ್ಯಾರಂಟಿ. ವರ್ಗಾವಣೆ ಭಾಗ್ಯ 11ನೇ ಗ್ಯಾರಂಟಿ.. ಭ್ರಷ್ಟಾಚಾರದಲ್ಲಿ ‌ನಾವೇ ನಂಬರ್‌-1 ಎಂದು‌ ಜಾಹೀರಾತು ಕೊಡಿ ಎಂದು ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

HDK ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹ