Select Your Language

Notifications

webdunia
webdunia
webdunia
webdunia

ರೌಡಿಶೀಟರ್ ಹಾಕುವ ಮುನ್ನ ಪೊಲೀಸ್ ಇಲಾಖೆ ಹೈಕೋರ್ಟ್ ನಿರ್ದೇಶನವನ್ನ ಪಾಲನೆ ಮಾಡಬೇಕು..!

ರೌಡಿಶೀಟರ್ ಹಾಕುವ ಮುನ್ನ ಪೊಲೀಸ್ ಇಲಾಖೆ ಹೈಕೋರ್ಟ್ ನಿರ್ದೇಶನವನ್ನ ಪಾಲನೆ ಮಾಡಬೇಕು..!
bangalore , ಬುಧವಾರ, 28 ಡಿಸೆಂಬರ್ 2022 (20:12 IST)
ಆರೋಪಿಗಳ ಮೇಲೆ ರೌಡಿಶೀಟ್ ತೆರೆಯುವಾಗ ರಾಜ್ಯ  ಅನುಸರಿಸಬೇಕಾದ ಬೇಕಾದ‌ ಕ್ರಮಗಳ ಬಗ್ಗೆ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿ‌ ನಿರ್ದೇಶಿಸಿದೆ.
ರೌಡಿಶೀಟ್ ತೆರೆಯುವ ಮುನ್ನ ಆ ವ್ಯಕ್ತಿಗೆ ನೋಟಿಸ್ ನೀಡಿ ಮಾಹಿತಿ ನೀಡಬೇಕು. ರೌಡಿಶೀಟ್ ಹಾಕದಂತೆ ಮನವಿ ಸಲ್ಲಿಸಲು ಅವಕಾಶ ನೀಡಬೇಕು. ಎರಡು ವರ್ಷಕ್ಕೊಮ್ಮೆ ರೌಡಿಶೀಟ್ ಸಮಗ್ರವಾದ ಪರಿಶೀಲನೆ ನಡೆಸಬೇಕು ರೌಡಿಶೀಟ್ ಬಗ್ಗೆ ಆಕ್ಷೇಪಣೆವಿದ್ದರೆ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು‌ ಹೈಕೋರ್ಟ್ ನಿರ್ದೇಶಿಸಿದೆ.ರಾಕೇಶ್ ಮಲ್ಲಿ ಹಾಗೂ 19 ರೌಡಿಶೀಟರ್ ಗಳ ಪ್ರತ್ಯೇಕವಾಗಿ  ಹೈಕೋರ್ಟ್ ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಪೀಠದಿಂದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರೌಡಿಶೀಟ್ ಹಾಕುವ ಬಗ್ಗೆ ವಿಸ್ಕೃತ ಕಾನೂನು ರಚಿಸುವವರೆಗೂ ಪೊಲೀಸ್ ಇಲಾಖೆ ಈ ಮಾರ್ಗಸೂಚಿ ಅನುಸರಿಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

10 ನೇ ದಿನಕ್ಕೆ ಕಾಲಿಟ್ಟ ಎನ್,ಪಿ,ಎಸ್ ನೌಕರರ ಪ್ರತಿಭಟನೆ