Publish Date: Wed, 28 Dec 2022 (17:29 IST)
Updated Date: Wed, 28 Dec 2022 (17:34 IST)
ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳನ್ನು ಜನರು ತೀವ್ರವಾಗಿ ಇಷ್ಟಪಡುತ್ತಾರೆ. ಸದ್ಯ ಈ ರೀತಿ ಮೆಟ್ರೋದ ವಿಡಿಯೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮೆಟ್ರೋದ ಸೀಟಿನ ಮೇಲೆ ಬೆಡ್‌ಶೀಟ್ ಹೊದ್ದುಕೊಂಡು ಸುಖವಾಗಿ ಮಲಗಿದ್ದ. ಅಂಥದ್ದೊಂದು ವಿಡಿಯೋ ಇದೀಗ ಮುನ್ನೆಲೆಗೆ ಬಂದಿದ್ದು, ಮೆಟ್ರೋದಲ್ಲಿ ಕುಳಿತ ಯುವಕನೊಬ್ಬ ಗಾಢ ನಿದ್ದೆಗೆ ಜಾರಿದ್ದಾನೆ. ಹುಡುಗ ಎಷ್ಟು ಗಾಢ ನಿದ್ದೆಯಲ್ಲಿದ್ದಾನೆಂದರೆ ಅವನು ನಿಧಾನವಾಗಿ ಸೀಟಿನಿಂದ ಮುಂದಕ್ಕೆ ವಾಲಲು ಪ್ರಾರಂಭಿಸುತ್ತಾನೆ, ಆಗ ಮಾತ್ರ ಹಸಿರು ಟಾಪ್ ಧರಿಸಿರುವ ಹುಡುಗಿಯ ನೋಟವು ಅವನ ಮೇಲೆ ಬೀಳುತ್ತದೆ. ಹುಡುಗ ಸೀಟಿನಿಂದ ಕೆಳಗೆ ಬೀಳುತ್ತಾನೆ ಎನ್ನುವ ವೇಳೆ, ಹುಡುಗಿ ಅವನ ಟಿ - ಶರ್ಟ್ ಹಿಡಿದು ಎಳೆದು ಹುಡುಗನು ಬೀಳದಂತೆ ರಕ್ಷಿಸುತ್ತಾಳೆ. ಈ ವಿಡಿಯೋ ಈಗ ವೈರಲ್ ಆಗಿದ್ದು ಈ ರೀತಿಯೂ ನಿದ್ರೆ ಮಾಡ್ತಾರಾ ಎಂದು ವೀಕ್ಷಕರು ಪ್ರತಿಕ್ರಿಯಿಸಿದ್ದಾರೆ.