Select Your Language

Notifications

webdunia
webdunia
webdunia
webdunia

ಎಣ್ಣೆ ಪಾತ್ರೆ ಮೈಮೇಲೆ ಎಳೆದುಕೊಂಡ ಮಗು

A child who pulled an oil pot over himself
bangalore , ಬುಧವಾರ, 28 ಡಿಸೆಂಬರ್ 2022 (17:26 IST)
ಮಕ್ಕಳನ್ನು ಪೋಷಕರು ಬಹಳ ಪ್ರೀತಿಯಿಂದ ಸಾಕ್ತಾರೆ. ಇತ್ತೀಚೆಗಂತೂ ದಂಪತಿಳಿಬ್ಬರೂ ಉದ್ಯೋಗ ಮಾಡುವುದರಿಂದ ಮಕ್ಕಳ ಮೇಲೆ ಹೆಚ್ಚಿನ ಗಮನ ಕೊಡಲು ಅವರಿಗೆ ಸಾಧ್ಯವಾಗುವುದಿಲ್ಲ. ಮಕ್ಕಳು ಬೆಳೆಯುತ್ತಿರುವಂತೆ ಅವುಗಳ ತುಂಟಾಟಗಳು ಎಲ್ಲರಿಗೂ ಇಷ್ಟವಾಗುತ್ತವೆ. ಕೆಲ ಮಕ್ಕಳು ಸುಮ್ಮನೆ ಇರದೇ ಏನೇನೋ ಮಾಡಲು ಹೋಗಿ ಅಪಾಯ ತಂದು ಕೊಳ್ಳುತ್ತಾರೆ. ಎಣ್ಣೆ ಪಾತ್ರೆಯನ್ನು ಮೈಮೇಲೆ ಎಳೆದುಕೊಳ್ಳುವ  ವಿಡಿಯೋ ಒಂದು ವೈರಲ್‌ ಆಗಿದೆ. ಆ ಮಗು ಇನ್ನು ನಡೆಯೋದನ್ನೆ ಕಲಿತಿಲ್ಲ. ಹಾಗಾಗಿ ಪೋಷಕರು ಮಗವನ್ನು ಚಕ್ರವಿರುವ ಪುಟ್ಟ ಗಾಡಿಯಲ್ಲಿ ಕೂರಿಸಿದ್ದಾರೆ. ಆ ಮಗು ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ಎಣ್ಣೆಯ ಪಾತ್ರೆಯನ್ನು ಎಳೆಯುತ್ತದೆ. ಆಗ ಸ್ಟ್ಯಾಂಡ್​​ ಸಮೇತ ಪಾತ್ರೆ ಮಗುವಿನ ಮೇಲೆ ಬೀಳುತ್ತದೆ. ಆಗ ಮಗು ಅಳಲು ಶುರು ಮಾಡಿದಾಗ ಅಪ್ಪ, ಅಮ್ಮ ಓಡಿ ಬರ್ತಾರೆ. ಸದ್ಯ ಎಣ್ಣೆ ಬಿಸಿ ಇಲ್ಲದ ಕಾರಣ ಮಗು ಅಪಾಯದಿಂದ ಪಾರಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚಿರತೆಯ ಹಲ್ಲೆ ದೃಶ್ಯ ಸೆರೆ