Publish Date: Wed, 08 Jan 2020 (15:03 IST)
Updated Date: Wed, 08 Jan 2020 (15:05 IST)
ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸರೇ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಸಾರಿಗೆ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸರೇ ನಿಯಮ ಉಲ್ಲಂಘಿಸಿದ್ದಾರೆ. ಹುಬ್ಬಳ್ಳಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಘಟನೆ ನಡೆದಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆರ್.ದೀಲಿಪ್ ಅವರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಂಗ್ ರೂಟ್ ನಲ್ಲಿ ಯೂ ಟರ್ನ್ ಮಾಡುವ ಮೂಲಕ ಹು-ಧಾ ಮಹಾನಗರ ಪೊಲೀಸ ಕಮಿಷನರ್ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಒನ್ ವೇ ಇದ್ದರೂ ಕೂಡಾ ಪೊಲೀಸ್ ಆಯುಕ್ತರ ಕಾರು ಅಲ್ಲೇ ಸಂಚರಿಸಿದೆ.
ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಸ್ಥಳಕ್ಕೆ ಬಂದಿದ್ದ ಆಯುಕ್ತರು, ಒನ್ ವೇ ಇದ್ದರೂ ಕೂಡ ಯಾವುದೇ ಸಂಚಾರಿ ನಿಯಮ ಪಾಲಿಸದೇ ಸಂಚಾರ ನಿಯಮವನ್ನು ಗಾಳಿಗೆ ತೂರಿದ್ದಾರೆ ಅಂತ ದೂರಲಾಗಿದೆ.
ಅಲ್ಲದೇ ರಾಂಗ್ ರೂಟ್ ನಲ್ಲಿ ಯೂ ಟರ್ನ್ ತೆಗದುಕೊಂಡ ಆಯುಕ್ತರ ಕಾರು ಹಾಗೂ ಬೆಂಗಾವಲು ಪಡೆಯ ಕಾರುಗಳ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.