Publish Date: Fri, 15 Dec 2023 (18:00 IST)
Updated Date: Fri, 15 Dec 2023 (19:34 IST)
ಸಂಸತ್ತಿನ ಒಳಗೆ ಮತ್ತು ಹೊರಗೆ ಹೊಗೆ ಬಾಂಬ್‌ಸ್ಫೋಟದ ಮೂಲಕ ಭಾರೀ ಭದ್ರತಾ ಲೋಪವಾದ ಘಟನೆಗೆ ಮುಹೂರ್ತ ಇಟ್ಟಿದ್ದೇ ಮೈಸೂರಿನಲ್ಲಿ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಆರೋಪಿಗಳೆಲ್ಲಾ ಬೇರೆ ಬೇರೆ ರಾಜ್ಯದವರಾದರೂ ಭಗತ್‌ಸಿಂಗ್ ಫ್ಯಾನ್ಸ್ ಕ್ಲಬ್ ಜಾಲತಾಣದಲ್ಲಿ ಪರಿಚಯವಾದ ಬಳಿಕ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆ, ಕಾರ್ಮಿಕರ ಸಮಸ್ಯೆ ಮೊದಲಾದ ವಿಷಯಗಳ ಬಗ್ಗೆ ಸಿಗ್ನಲ್ ಎಂಬ ಖಾಸಗಿ ಆ್ಯಪ್‌ನಲ್ಲಿ ಚರ್ಚೆ ನಡೆಸಿದ್ದರು ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ.