Select Your Language

Notifications

webdunia
webdunia
webdunia
webdunia

ತಡೆಗೋಡೆಯ ಗೇಟ್ ಒಡೆದು ಹಾಕಿದ ಪೈಲಟ್

ತಡೆಗೋಡೆಯ ಗೇಟ್ ಒಡೆದು ಹಾಕಿದ ಪೈಲಟ್
bangalore , ಮಂಗಳವಾರ, 22 ಆಗಸ್ಟ್ 2023 (18:26 IST)
ಡೆನ್ವರ್​​ನ ವಿಮಾನ ನಿಲ್ದಾಣದಲ್ಲಿ ಯುನೈಟೆಡ್ ಏರ್​ಲೈನ್ಸ್​ನ ಪೈಲಟ್​ ಒಬ್ಬ ಪಾರ್ಕಿಂಗ್ ಸ್ಥಳದಲ್ಲಿದ್ದ ತಡೆಗೋಡೆಯ ಗೇಟ್​ಗೆ ಕೊಡಲಿಯಿಂದ ಒಡೆದು ಸಿಕ್ಕಿಬಿದ್ದಿದ್ದಾನೆ. 63 ವರ್ಷದ ಕೆನ್ನತ್ ಹೆಂಡರ್ಸನ್ ಎನ್ನುವ ವ್ಯಕ್ತಿ ಕೊಡಲಿಯನ್ನು ಎತ್ತಿಕೊಂಡು ನಿರ್ಗಮನದ ಗೇಟ್ ಕಡೆ ತೆರಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಕೊಡಲಿಯಿಂದ ಪಾರ್ಕಿಂಗ್ ಗೇಟ್​ಗೆ 20 ಬಾರಿ ಹೊಡೆದಿದ್ದು, ಪರಿಣಾಮ ಗೇಟ್ ಬಾಗಿಲು ಮುರಿದಿದೆ. ತಡೆಗೋಡೆಯ ಗೇಟ್​ನ್ನು ಮುರಿದು ಸ್ಥಳದಿಂದ ಹೋಗಲು ಯತ್ನಿಸಿದಾಗ ಅಲ್ಲಿಯೇ ಇದ್ದ ಇನ್ನೊಬ್ಬ ಉದ್ಯೋಗಿ ಆತನಿಂದ ಕೊಡಲಿಯನ್ನು ತೆಗೆದುಕೊಂಡಿದ್ದಾನೆ. ನಂತರ ಆ ಪೈಲಟ್​ನನ್ನ ಡೆನ್ವರ್ ಪೊಲೀಸರು ಹತ್ತಿರದ ಮೈದಾನದಲ್ಲಿ ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಚಲಾಯಿಸಲು ಪರದಾಡಿದ KSRTC ಡ್ರೈವರ್