Select Your Language

Notifications

webdunia
webdunia
webdunia
webdunia

ವಿಶ್ವದಲ್ಲೇ ಮೊದಲ ಬಿದಿರಿನ ತಡೆಗೋಡೆ ಸ್ಥಾಪನೆ : ನಿತಿನ್ ಗಡ್ಕರಿ

ವಿಶ್ವದಲ್ಲೇ ಮೊದಲ ಬಿದಿರಿನ ತಡೆಗೋಡೆ ಸ್ಥಾಪನೆ : ನಿತಿನ್ ಗಡ್ಕರಿ
ಮುಂಬೈ , ಭಾನುವಾರ, 5 ಮಾರ್ಚ್ 2023 (11:27 IST)
ಮುಂಬೈ : ಮಹಾರಾಷ್ಟ್ರದ ಚಂದ್ರಾಪುರ ಮತ್ತು ಯವತ್ಮಾಲ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ 200 ಮೀಟರ್ ಉದ್ದದ ಬಿದಿರಿನ ಕ್ರ್ಯಾಶ್ ಬ್ಯಾರಿಯರ್ ಅನ್ನು ಸ್ಥಾಪಿಸಲಾಗಿದೆ.
 
ಇದು ವಿಶ್ವದ ಮೊದಲ ಬ್ಯಾರಿಯರ್ ಆಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದು ದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ. ಬಿದಿರಿನ ಕ್ರ್ಯಾಶ್ ಬ್ಯಾರಿಯರ್, ಉಕ್ಕಿಗೆ ಪರ್ಯಾಯವಾಗಿದೆ. ಅಷ್ಟೇ ಅಲ್ಲದೇ ಪರಿಸರಕ್ಕೆ ಪೂರಕವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ವಾಣಿ-ವರೋರಾ ಹೆದ್ದಾರಿಯಲ್ಲಿ ಸ್ಥಾಪಿಸಲಾದ ವಿಶ್ವದ ಮೊದಲ 200 ಮೀಟರ್ ಉದ್ದದ ಬಿದಿರು ಕ್ರ್ಯಾಶ್ ಬ್ಯಾರಿಯರ್ನ ಅಭಿವೃದ್ಧಿಯೊಂದಿಗೆ ʼಆತ್ಮನಿರ್ಭರ ಭಾರತʼ ಸಾಧಿಸುವ ನಿಟ್ಟಿನಲ್ಲಿ ಅಸಾಧಾರಣ ಸಾಧನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲಿದ್ದಲಿನಿಂದ ಭಾರತದ ಲಕ್ಷಾಂತರ ಮಂದಿಗೆ ವಿದ್ಯುತ್ : ಟೋನಿ ಅಬಾಟ್