Select Your Language

Notifications

webdunia
webdunia
webdunia
webdunia

ಮೂತ್ರ ವಿಸರ್ಜನೆ ಕೇಸ್ನಲ್ಲಿ ಪೈಲಟ್ ಬಲಿಪಶು !

ಮೂತ್ರ ವಿಸರ್ಜನೆ ಕೇಸ್ನಲ್ಲಿ ಪೈಲಟ್ ಬಲಿಪಶು !
ನವದೆಹಲಿ , ಭಾನುವಾರ, 22 ಜನವರಿ 2023 (11:03 IST)
ನವದೆಹಲಿ : ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಪೈಲಟ್ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಏರ್ ಇಂಡಿಯಾ ಪೈಲಟ್ ಒಕ್ಕೂಟ ಹೇಳಿದೆ.

ಕುಡಿದ ಅಮಲಿನಲ್ಲಿ ವೃದ್ಧ ಪ್ರಯಾಣಿಕರೊಬ್ಬರ ಮೇಲೆ ಶಂಕರ್ ಮಿಶ್ರಾ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್-ನವದೆಹಲಿ ವಿಮಾನದ ಪೈಲಟ್ ಅವರ ಪರವಾನಗಿಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು 3 ತಿಂಗಳ ಕಾಲ ಅಮಾನತುಗೊಳಿಸಿದೆ.

ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಪೈಲಟ್ ಒಕ್ಕೂಟ ಕಾನೂನು ಸಮರ ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಸದಸ್ಯರೊಬ್ಬರು ಪ್ರತಿಕ್ರಿಯಿಸಿ, ಪೈಲಟ್ ತ್ವರಿತವಾಗಿ ಮತ್ತು ಪ್ರಬುದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಘಟನೆಯ ಬಗ್ಗೆ ಅಂದೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡದೇ ಇದ್ದರೂ ಪೈಲಟ್ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಕೋಟಿ ವೃಕ್ಷ ಅಭಿಯಾನ-2023ಕ್ಕೆ ಮುಖ್ಯ ಆಯುಕ್ತರಿಂದ ಚಾಲನೆ