Select Your Language

Notifications

webdunia
webdunia
webdunia
webdunia

ಸುಳ್ಳು ಕಥೆಕಟ್ಟಿದವ್ಳು ಕೊನೆಗೂ ಲಾಕ್..ಪ್ರಶ್ನಿಸಲು ಹೋದ ಗಂಡ ನಿಗೂಢ ಸಾವು

The one who made up the false story is finally locked
bangalore , ಮಂಗಳವಾರ, 21 ಫೆಬ್ರವರಿ 2023 (20:32 IST)
ಅವ್ರದ್ದು 10 ವರ್ಷದ ದಾಂಪತ್ಯ ಜೀವನ.ಜೊತೆಗೆ ಇದ್ದವರ ಮಧ್ಯೆ ವಿಲನ್ ಒಬ್ಬ ಎಂಟ್ರಿಯಾಗಿದ್ದ.ಪತ್ನಿಯೊಂದಿಗೆ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದ.ಇಬ್ರು ಗಂಡನಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಜಾಲಿ ರೈಡ್ ಮಾಡತೊಡಗಿದ್ರು.ಹೀಗೆ ಹೋಗಿದ್ದಾಗ ಯಡವಟ್ಟೊಂದು ನಡೆದುಹೋಗಿತ್ತು.ಸತ್ಯ ಮರೆಮಾಚಿ ಸುಳ್ಳಿನ‌ ಸರಮಾಲೆಯನ್ನೇ ಪೋಣಿಸಿದ್ಳು ಪತ್ನಿ.ನಿಜ ಗೊತ್ತಾಗಿ ಪ್ರಶ್ನಿಸಲು ಹೋಗಿದ್ದ ಪತಿಯೇ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
 
ವಿನೋದ್ ಕಾರ್ಪೆಟ್ ವ್ಯಾಪಾರ ಮಾಡೊ ಕೆಲಸ ಮಾಡಿಕೊಂಡಿದ್ದ‌.ನಿರ್ಮಲ ಮನೆಯಲ್ಲಿಯೇ ಇದ್ಳು.ನಾನು ಬಡವ,ನೀನು ಬಡವಿ,ಒಲವೆ ನಮ್ಮ ಬದುಕು ಅಂತಾ 10 ವರ್ಷ ಒಟ್ಟೊಟ್ಟಿಗೆ ಜೀವನ ನಡೆಸ್ತಿದ್ರು.ಇನ್ನೂ ಒಳ್ಳೆ ಕಪ್ಪಗೆ ಕಾಡಹಂದಿ ರೀತಿ ಇದ್ದಾನಲ್ಲ ಇವ್ನು ಕಿರಣ್ ಅಂತಾ.ಇವ್ನೋ ಇವ್ನ ಹುಟ್ಟೋ ಹೆಂಡತಿಯೊಂದು ಜೊತೆಲಿದ್ರು ಸುತ್ತಾಡೋಕೆ ಪ್ರೇಮದರಸಿ ಹುಡುಕ್ತಾ ಇದ್ದ‌ ಮಂಗನಿಗೆ ಸಿಕ್ಕಿದ್ದೇ ಈ ಸುರಸುಂದರಾಂಗಿ ನಿರ್ಮಲಾ.ಇವರ ಈ ಅಕ್ರಮ ಸಂಬಂಧಕ್ಕೆ ಸದ್ಯ ಪತಿ ವಿನೋದ ಸಾವಿನ ಮನೆ ಸೇರುವಂತಾಗಿದೆ.

ವಿನೋದ್ ಮತ್ತು ನಿರ್ಮಲಾ 10 ವರ್ಷದ ಹಿಂದೆ ವಿವಾಹವಾಗಿದ್ರು.ದಂಪತಿಗೆ ಇಬ್ಬರು ಮಕ್ಕಳಿದ್ದಾರೆ‌.ಕೆ.ಆರ್.ಪುರಂ ನಿಂದ ಬಂದು ವೈಯಾಲಿ ಕಾವಲ್ ನಲ್ಲಿ ಸಣ್ಣದೊಂದು ಮನೆ ಮಾಡಿಕೊಂಡುವಾಸವಿದ್ರು.ಹೀಗೆ ಇದ್ದವರ ಮಧ್ಯೆ ಎಂಟ್ರಿ ಆದವನೇ ಈ‌ ಕಿರಣ್ ಎಂಬಾತ.ಕಿರಣ್ ಕೂಡ ವಿನೋದ್ ಮತ್ತು ನಿರ್ಮಲಾ ವಾಸ ಇರೊ ರಸ್ತೆಯಲ್ಲೇ ವಾಸವಿದ್ದ.ಮನೆಲಿ ಪತ್ನಿ ಇದ್ದರೂ ನಿರ್ಮಲಾ ಸಂಗ ಮಾಡಿದ್ದ‌.ಮತ್ತೊಂದು ಸಂಗತಿ ಅಂದ್ರೆ ಕಿರಣ್ ಗಾಗಿಯೇ ನಿರ್ಮಲಾ ವೈಯಾಲಿ ಕಾವಲ್ ನಲ್ಲಿ ಮನೆ ಮಾಡಿಸಿದ್ಳು ಅಂತಾನು ಹೇಳಲಾಗ್ತಿದೆ.ಹೀಗಿರ್ಬೇಕಾದ್ರೆ ಕಳೆದ ಎರಡು ತಿಂಗಳಿಂದ ವಿನೋದ್ ಮನೆಯಲ್ಲಿ ಗಲಾಟೆಯಾಗಿ ಪತಿಯನ್ನ ಮನೆಬಿಟ್ಟು ಓಡಿಸಿದ್ಳಂತೆ.ಆಗ ಆತ ತಂದೆ ತಾಯಿಯ ಕೆ.ಆರ್.ಪುರಂ ಮನೆಯಲ್ಲಿ ವಾಸವಿದ್ದ.

ಹೀಗಿರ್ಬೇಕಾದ್ರೆ ಒಂದು ದಿನ ಪತ್ನಿಗೆ ಅಪಘಾತವಾಗಿದೆ ಅನ್ನೋ ಸುದ್ದಿ ಗೊತ್ತಾಗಿದೆ.ಅಪಘಾತದಲ್ಲಿ ನಿರ್ಮಲ ಕಣ್ಣಿಗೆ ಗಾಯವಾಗಿತ್ತು.ಏನೇ ಆದ್ರು ಹೆಂಡತಿ ಅಲ್ವಾ ಅಂತಾ ಓಡಿಬಂದವನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ಕೊಡಿಸಿದ್ದ.ಈ ವೇಳೆ ಸದಾಶಿವನಗರದಲ್ಲಿ ಸತ್ಯನಾರಾಯಣ ಪೂಜೆಗೆ ಹೋಗಿ ಬರ್ತಿದ್ದಾಗ ಆಟೋ ಬಂದು ಗುದ್ದಿಬಿಡ್ತು ಅಂತಾ ಹೇಳಿದ್ಲಂತೆ.ಆಗಿದ್ದಾಯ್ತು ಕಿರಣ್ ಸಹವಾಸ ಬಿಟ್ಟುಬಿಡು ಬೇರೆಕಡೆ ಹೋಗಿ ಒಳ್ಳೆ ಬದುಕು ಕಟ್ಟಿಕೊಳ್ಳೋಣ ಅಂತಲೂ ಹೇಳಿದ್ನಂತೆ.

ಹೀಗಿರಬೇಕಾದರೆ ಒಂದು ದಿನ ಅಪಘಾತದ ಅಸಲಿಯತ್ತು ವಿನೋದ್ ಗೆ ಗೊತ್ತಾಗಿದೆ.ಪ್ರಿಯಕರ ಕಿರಣ್ ಜೊತೆಗೆ ನಂದಿಬೆಟ್ಟಕ್ಕೆ ಹೋಗಿ ಬರ್ಬೇಕಾದರೆ ಕಿರಣ್ ಕುಡಿದು ಟೈಟಾಗಿದ್ನಂತೆ.ನಿರ್ಮಲಾ ಬೈಕ್ ಓಡಿಸಿಕೊಂಡು ಬಂದು ಹಿಂಬದಿಯಿಂದ ಟಿಪ್ಪರ್ ಗೆ ಗುದ್ದಿದ್ದಾಳೆ.ಇದನ್ನ ಪ್ರಶ್ನೆ ಮಾಡೋಕೆ ಅಂತಾ ನಿನ್ನೆ ಬೆಳಗ್ಗೆ ಪತ್ನಿ ಇದ್ದ ವೈಯಾಲಿಕಾವಲ್ ಮನೆಗೆ ಬಂದಿದ್ದ.ವಿನೋದ್ ಕುಟುಂಬಸ್ಥರು ಬೆಳಗ್ಗೆಯಿಂದ ಕರೆ ಮಾಡಿದ್ರು ಉತ್ತರಿಸಿರಲಿಲ್ಲ.ಸಂಜೆ ಆಗ್ತಿದ್ದಂತೆ ಫೋನ್ ರಿಸೀವ್ ಮಾಡಿದ್ದ ನಿರ್ಮಲ ಕುಟುಂಬಸ್ಥರು ವಿನೋದ್ ಆ್ಯಸಿಡ್ ಸೇವಿಸಿರೋದಾಗಿ ಹೇಳಿದ್ದರಂತೆ.ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯ್ತಾದ್ರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.ಸದ್ಯ ವಿನೋದ್ ಕುಟುಂಬಸ್ಥರು ನಿರ್ಮಲಾ ಕುಟುಂಬಸ್ಥರೇ ವಿಷ ಕುಡಿಸಿ ಕೊಂದಿದ್ದಾರೆ ಎಂದು ಆರೋಪಿಸಿದ್ದು,ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಗೊತ್ತಾಗಬೇಕಾಗುದೆ
 

Share this Story:

Follow Webdunia kannada

ಮುಂದಿನ ಸುದ್ದಿ

ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ - ಸಚಿವರಿಗೆ ಸಿದ್ದು ಸವಾಲು