Select Your Language

Notifications

webdunia
webdunia
webdunia
webdunia

ಬಹು ನಿರೀಕ್ಷಿತ ಬಿಬಿಎಂಪಿ ಆಯವ್ಯಯ ಮಂಡನೆಗೆ ಮುಹೂರ್ತ ಫಿಕ್ಸ್

ಬಹು ನಿರೀಕ್ಷಿತ ಬಿಬಿಎಂಪಿ ಆಯವ್ಯಯ ಮಂಡನೆಗೆ ಮುಹೂರ್ತ ಫಿಕ್ಸ್
bangalore , ಮಂಗಳವಾರ, 21 ಫೆಬ್ರವರಿ 2023 (17:15 IST)
ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ದಿನಾಂಕ ಕೊನೆಗೂ ನಿಗದಿಯಾಗಿದೆ.ಕಳೆದ ಬಜೆಟ್ ನ ಲೆಕ್ಕಾಚಾರ ಕಾರ್ಯವನ್ನ ಪಾಲಿಕೆ ಅಧಿಕಾರಿಗಳು ಮುಗಿಸಿದಾರೆ.ಇದೇ 24 ರಂದು ಪಾಲಿಕೆ ಅಧಿಕಾರಿಗಳಿಂದ ನಗರಭಿವೃದ್ಧಿ ಇಲಾಖೆಗೆ ಅಯುವ್ಯಯದ ಪಟ್ಟಿ ಸಲ್ಲಿಕೆಯಾಗಲಿದೆ.ಮಾರ್ಚ್ 3 ರಂದು ಪಾಲಿಕೆ ಬಜೆಟ್ ಗೆ ಮುಹೂರ್ತವನ್ನ ಸರ್ಕಾರ ನಿಗದಿ ಮಾಡಿದೆ.ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ರವರಿಂದ ಬಜೆಟ್ ಮಂಡನೆಯಾಗಲಿದೆ.
 
ಬಿಬಿಎಂಪಿ ಆದ ಮೇಲೆ ಮೂರನೇ ಬಾರಿ ಅಧಿಕಾರಿಗಳಿಂದ  ಬಜೆಟ್ ಮಂಡನೆಯಾಗಲಿದೆ.ಬಿಬಿಎಂಪಿಯ ಕೇಂದ್ರ ಕಛೇರಿಯಲ್ಲಿ ಬಜೆಟ್ ಮಂಡನೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ಈ ಬಾರಿಯೂ ಕೂಡ ಬಜೆಟ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇಲ್ಲ.ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಆನ್ ಲೈನ್ ಮುಖಾಂತರವೇ ಆಯವ್ಯಯ ಮಂಡನೆಯಾಗಲಿದೆ.ಕಳೆದ ವರ್ಷದ ಕೆಲ ಯೋಜನೆಗಳ ಪುನರಾವರ್ತನೆಗೆ ಹಾಗೂ ಕಾಮಗಾರಿ ಪೂರ್ಣ ಮಾಡಲು ಬಿಬಿಎಂಪಿ ಚಿಂತಿಸಿದೆ.
 
ಪಾಲಿಕೆಯಿಂದ ಹಲವು ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನಕ್ಕೂ ಬ್ರೇಕ್ ಬಿದ್ದಿದ್ದು,ಮಾರ್ಚ್ 03 ರಂದು ಬಜೆಟ್ ಮಂಡನೆಗೆ ಅನುಮತಿ ಕೋರಿ ಸಿಎಂಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.ಸಿಎಂ ಬೊಮ್ಮಾಯಿ ಒಪ್ಪಿಗೆ ಬೆನ್ನಲ್ಲೇ ಅಧಿಕೃತವಾಗಿ ದಿನಾಂಕವನ್ನ ಬಿಬಿಎಂಪಿ ಪ್ರಕಟಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾವು & ನಾಯಿಯ ನಡುವೆ ಘರ್ಷಣೆ