Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ಬಾಲತಾಯಂದಿರ ಸಂಖ್ಯೆ

ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ಬಾಲತಾಯಂದಿರ ಸಂಖ್ಯೆ
bangalore , ಭಾನುವಾರ, 20 ಆಗಸ್ಟ್ 2023 (16:37 IST)
ಬಾಲ್ಯವಿವಾಹ ನಿಷೇಧ ಜಾರಿಯಲ್ಲಿದ್ದರೂ, ರಾಜ್ಯದಲ್ಲಿ ಮೂರೂವರೆ ವರ್ಷದಲ್ಲಿ 45,557 ಬಾಲ ತಾಯಂದಿರ ಸಂಖ್ಯೆ ಹೆಚ್ಚಳವಾಗಿದೆ. ಕೋವಿಡ್‌ ನಂತರದ ವರ್ಷ 2022ರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ. ಇನ್ನು ಬೆಂಗಳೂರು ನಗರದಲ್ಲೇ 6,207 ಬಾಲತಾಯಂದಿರ ಸಂಖ್ಯೆ ದಾಖಲಾಗಿದೆ. 30 ಜಿಲ್ಲೆಗಳ ಪೈಕಿ ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣ ಇವೆ. ಬೆಂಗಳೂರು ನಗರದಲ್ಲಿ 2020 ರಲ್ಲಿ 1,794  ಬಾಲತಾಯಂದಿರ ಸಂಖ್ಯೆ ದಾಖಲಾಗಿತ್ತು. ಇನ್ನು 2022 ರಲ್ಲಿ 2,137 ಬಾಲತಾಯಂದಿರ ಸಂಖ್ಯೆ ಹೆಚ್ಚಾಗಿದೆ. ಕಲಬುರಗಿ, ಬಳ್ಳಾರಿ, ಮೈಸೂರು, ತುಮಕೂರು, ಬೆಳಗಾವಿ ಮತ್ತು ಚಿತ್ರದುರ್ಗದಲ್ಲಿ 1 ಸಾವಿರಕ್ಕಿಂತ ಹೆಚ್ಚು ಹಾಗೂ 2 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ವರ್ಷದ ಮೊದಲ ಆರು ತಿಂಗಳಲ್ಲೂ ಬೆಂಗಳೂರು ನಗರ ಜಿಲ್ಲೆಯಲ್ಲೇ ಅಧಿಕ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶಕಿ ಎಂ.ಇಂದುಮತಿ ಮಾಹಿತಿ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಟಿಕೆಟ್ ಬದಲಾಗಿ ಮಹಿಳೆಯರ ಕೈ ಸೇರಲಿದೆ ‘ಶಕ್ತಿ’ ಸ್ಮಾರ್ಟ್ ಕಾರ್ಡ್