Select Your Language

Notifications

webdunia
webdunia
webdunia
webdunia

ಟಿಕೆಟ್ ಬದಲಾಗಿ ಮಹಿಳೆಯರ ಕೈ ಸೇರಲಿದೆ ‘ಶಕ್ತಿ’ ಸ್ಮಾರ್ಟ್ ಕಾರ್ಡ್

ಟಿಕೆಟ್ ಬದಲಾಗಿ ಮಹಿಳೆಯರ ಕೈ ಸೇರಲಿದೆ ‘ಶಕ್ತಿ’ ಸ್ಮಾರ್ಟ್ ಕಾರ್ಡ್
bangalore , ಭಾನುವಾರ, 20 ಆಗಸ್ಟ್ 2023 (16:00 IST)
ಇನ್ನೂ ಮುಂದೆ ಮಹಿಳೆಯರು ಬಸ್ ಗಳಲ್ಲಿ ಟಿಕೆಟ್ ಪಡಿಯೋಹಾಗಿಲ್ಲ.  ನಮ್ಮ ಮೆಟ್ರೋನಲ್ಲಿ ಬಳಕೆ ಆಗುತ್ತಿರುವ ಟ್ಯಾಪ್ & ಟ್ರಾವೆಲ್ ಮಾದರಿಯನ್ನ ಬಿಎಂಟಿಸಿಗೆ ತರಲು ಚಿಂತನೆ ನಡೆದಿದ್ದು, ಬಸ್ ಹತ್ತುವಾಗ ಬಾಗಿಲಲ್ಲಿ ಅಳವಡಿಸೋ ಯಂತ್ರಕ್ಕೆ ಟ್ಯಾಪಿಂಗ್ ಇಳಿಯುವಾಗ ಮತ್ತೊಮ್ಮೆ ಕಾರ್ಡ್ನ ಟ್ಯಾಪ್ ಮಾಡಿ ಇಳಿಯಬೇಕು. ರಷ್ ಇದ್ದಾಗ ದಾಖಲೆ ಪರಿಶೀಲಿಸಿ ಟಿಕೆಟ್ ನೀಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಕಂಡಕ್ಟರ್ಗೆ ಆಗೋ ಸಮಸ್ಯೆ ತಪ್ಪಿಸುವುದಕ್ಕೆ ಬಿಎಂಟಿಸಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಟ್ಯಾಪ್ ಮಾಡಿದಾಗ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ಸೇವ್ ಆಗುತ್ತೆ.. ಎನ್ಸಿಎಂಸಿ ಕಾರ್ಡ್ ಬಿಎಂಟಿಸಿಯಲ್ಲಿ ಅಳವಡಿಸಿಕೊಳ್ಳಲು ಈಗಾಗಲೇ ಕೇಂದ್ರ ಸಾರಿಗೆ ‌ಇಲಾಖೆಗೆ ಅನುಮತಿ ಕೇಳಿದ್ದು ಅನುಮತಿ ಸಿಕ್ಕ ನಂತರ ಜಾರಿ ಮಾಡೊದಾಗಿ ಬಿಎಂಟಿಸಿ ತಿಳಿಸಿದೆ.
 
ಬಿಎಂಟಿಸಿ ಏನ್ನೂ ಪ್ಲಾನ್ ಮಾಡಿದ್ದು ಲಾಭಕ್ಕಿಂತ ನಷ್ಟ ಮಾಡುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಪ್ರತಿ ಯಂತ್ರಕ್ಕೆ ಕನಿಷ್ಠ 5 ರಿಂದ 6 ಸಾವಿರ ರೂಪಾಯಿ ವೆಚ್ಚವಾಗುತ್ತಂತೆ. ಬಸ್ಗೆ ಎರಡು ಬಾಗಿಲಿದ್ದಲ್ಲಿ ಎರಡೂ ಕಡೆ ಯಂತ್ರ ಅಳವಡಿಸಬೇಕು ಯಂತ್ರ ಅಳವಡಿಕೆಗೇ ಸುಮಾರು 7 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗುತ್ತೆ ಮಹಿಳೆಯರು ಟ್ಯಾಪ್ ಮಾಡಿ ಹತ್ತೋದಕ್ಕೆ ಸಮಯವೂ ವ್ಯರ್ಥವಾಗುತ್ತೆ. ಬಸ್ಗಳು ರಶ್ ಇದ್ದಾಗ ಜನರಿಗೂ ಇದರಿಂದ ಕಿರಿಕಿರಿ ಆಗುವ ಸಾಧ್ಯತೆ ಇದೆ. ಬಸ್ ಇಳಿಯುವಾಗ ಟ್ಯಾಪ್ ಮಾಡದೇ ಹೋಗುವ ಸಾಧ್ಯತೆಗಳೂ ಹೆಚ್ಚಿರುತ್ತದೆ. ಉಚಿತ ಸಂಚಾರದ ಟಿಕೆಟ್ ಮೌಲ್ಯ ಗೊತ್ತಾಗದಿದ್ರೆ ಲೆಕ್ಕ ಕೊಡಲಾಗಲ್ಲ. ಶಕ್ತಿ ಯೋಜನೆ ಹಣ ಬೇಕು ಅಂದ್ರೆ ಸರ್ಕಾರಕ್ಕೆ ಲೆಕ್ಕವನ್ನ ಕೊಡಲೇಬೇಕು‌‌. ಹಾಗಾಗಿ ಈ ಬಗ್ಗೆ ಎಲ್ಲಾ ಸಾಧಕಭಾದಕಗಳನ್ನು ಬಿಎಂಟಿಸಿ ಪರಿಶೀಲನೆ ನಡೆಸುತ್ತಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್ ನಿಂದ ಸ್ಮಾರ್ಟ್ ಕಾರ್ಡ್ ಪ್ರಯಾಣಿಕರ ಕೈ ಸೇರಬಹುದು ಹೇಳಲಾಗುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೆಂದು ದಿನಕ್ಕೆ ಗಗನಕ್ಕೆ ಏರುತ್ತಿರುವ ತರಕಾರಿ ಬೆಲೆಗಳು