Select Your Language

Notifications

webdunia
webdunia
webdunia
webdunia

ಮುಂದಿನ ಚುನಾವಣೆಗಳು ನಳಿನ್ ಕಟೀಲ್ ನೇತೃತ್ವದಲ್ಲೇ: ಸಿಎಂ ಬೊಮ್ಮಾಯಿ

ಮುಂದಿನ ಚುನಾವಣೆಗಳು ನಳಿನ್ ಕಟೀಲ್ ನೇತೃತ್ವದಲ್ಲೇ: ಸಿಎಂ ಬೊಮ್ಮಾಯಿ
ಬೆಂಗಳೂರು , ಶುಕ್ರವಾರ, 27 ಆಗಸ್ಟ್ 2021 (11:39 IST)
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಅರರು ಎರಡು ವರ್ಷ ಪೂರೈಸಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಪಕ್ಷ ಬಲಗೊಂಡಿದೆ. ಪಕ್ಷ ಬಹಳಷ್ಟು ಸಂಘಟಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಇಡೀ ರಾಜ್ಯವನ್ನ ಐದು ಬಾರಿ ಪ್ರವಾಸ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ಸರ್ಕಾರದಲ್ಲಿ ರಚನೆಯಲ್ಲಿ ಬಹಳ ಮಹತ್ವ ಪಾತ್ರ ಇದೆ ಎಂದರು.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬೈ ಎಲೆಕ್ಷನ್ ಗಳು ಅವರ ನೇತೃತ್ವದಲ್ಲಿಯೇ ನಡೆಯುತ್ತದೆ. ಬರುವ ದಿನಗಳಲ್ಲಿ ಅವರ ನಾಯಕತ್ವವನ್ನು ಜನರು ಎದುರು ನೋಡುತ್ತಿದ್ದಾರೆ. ಮೂರು ಮಹಾನಗರ ಪಾಲಿಕೆ ಚುನಾವಣೆಗಳು ಅವರ ನೇತೃತ್ವದಲ್ಲಿ ನಡೆಯುತ್ತದೆ. ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಸಿಎಂ ಬೊಮ್ಮಯಿ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

44,658 ಹೊಸ ಕರೊನಾ ಪ್ರಕರಣ ದಾಖಲು