Select Your Language

Notifications

webdunia
webdunia
webdunia
webdunia

ದೇಶದ 363 ಶಾಸಕ, ಸಂಸದರು ಕ್ರಿಮಿನಲ್ ಗಳು: ಬಿಜೆಪಿ ನಂ.1

ದೇಶದ 363 ಶಾಸಕ, ಸಂಸದರು ಕ್ರಿಮಿನಲ್ ಗಳು: ಬಿಜೆಪಿ ನಂ.1
bengaluru , ಮಂಗಳವಾರ, 24 ಆಗಸ್ಟ್ 2021 (15:44 IST)
ದೇಶದ 363 ಹಾಲಿ ಶಾಸಕರು, ಸಂಸದರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು, 83 ಮಂದಿ ಕ್ರಿಮಿನಲ್ ಗಳನ್ನು ಆಡಳಿತದಲ್ಲಿ ಹೊಂದಿರುವ ಬಿಜೆಪಿ ನಂಬರ್ 1 ಸ್ಥಾನದಲ್ಲಿದೆ.
ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ - ಎಡಿಆರ್‌(ADR) ವರದಿ ಬಿಡುಗಡೆ ಮಾಡಿದ ವರದಿ ಪ್ರಕಾರ ಈ ಜನಪ್ರತಿನಿಧಿಗಳ ವಿರುದ್ಧ ಆರ್‌ಪಿ ಕಾಯ್ದೆ 1951 ರ ಸೆಕ್ಷನ್ 8 (1) (2) & (3) ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಎಡಿಆರ್‌ನ ವರದಿ ಪ್ರಕಾರ ಕಾಂಗ್ರೆಸ್‌ನ 47 ಹಾಗೂ ಟಿಎಂಸಿಯ 25 ಜನಪ್ರತಿನಿಧಿಗಳು ಕ್ರಿಮಿನಲ್‌ ಪ್ರಕರಣಗಳನ್ನು ಹೊಂದಿದ್ದು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
2019ರ ಲೋಕಸಭಾ ಚುನಾವಣೆಗಳಲ್ಲಿ ಗೆದ್ದಿರುವ 67 ಸಂಸದರು, 2020 ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 54 ಶಾಸಕರು ಹಾಗೂ 2021ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ 42 ಶಾಸಕರು ಆರ್‌ಪಿ ಕಾಯ್ದೆ-1951ರ ಸೆಕ್ಷನ್‌ 8 (1) (2) & ( 3) ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.
ಕೇಂದ್ರದ ನಾಲ್ವರು ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ವಿವಿಧ ರಾಜ್ಯಗಳ 35 ಸಚಿವರ ವಿರುದ್ಧ ಕ್ರಿಮಿನಲ್‌ ಆರೋಪಗಳು ಇವೆ. ಅಲ್ಲದೆ 24 ಸಂಸದರ ವಿರುದ್ಧ ಒಟ್ಟು 43 ಹಾಗೂ 111 ಶಾಸಕರ ವಿರುದ್ಧ ಒಟ್ಟು 315 ಕ್ರಿಮಿನಲ್ ಪ್ರಕರಣಗಳಿವೆ ಎಂದು ವರದಿ ಉಲ್ಲೇಖಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲೇಶ್ವರ ಸರಕಾರಿ ಪಿಯು ಕಾಲೇಜಿಗೆ ಸಿಎಂ ಬೊಮ್ಮಾಯಿ ಭೇಟಿ