Select Your Language

Notifications

webdunia
webdunia
webdunia
webdunia

ನಾನೇನು ಬೀದಿ ನಾಟಕ ಮಾಡಿಲ್ಲ: ಆನಂದ್ ಸಿಂಗ್

anand singh
bengaluru , ಮಂಗಳವಾರ, 24 ಆಗಸ್ಟ್ 2021 (14:20 IST)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಧಾನದ ಹಿನ್ನೆಲೆಯಲ್ಲಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್ ಮಂಗಳವಾರ ಪ್ರವಾಸೋದ್ಯಮ
ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ಬೆಂಗಳೂರಿನ ವಿಧಾನಸೌಧ ಪಕ್ಕದ ವಿಕಾಸ ಸೌಧಕ್ಕೆ ಸ್ಥಳಾಂತರಗೊಂಡಿರುವ ಪ್ರವಾಸೋದ್ಯಮ ಕಚೇರಿಯಲ್ಲಿ ಆನಂದ್ ಸಿಂಗ್ ಅಧಿಕಾರ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ನನ್ನ ಮನವಿ ಸಲ್ಲಿಸಿದ್ದೇನೆ. ಸಿಎಂ ಕೂಡ ವರಿಷ್ಠರ ಜೊತೆ ಚರ್ಚಿಸ್ತೇನೆ ಎಂದಿದ್ದಾರೆ. ಹೀಗಾಗಿ ಪಕ್ಷ ಹಾಗೂ ಅವರ ಮಾತಿಗೆ ಬೆಲೆ ನೀಡಿ ಖಾತೆ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದೇನೆ ಎಂದರು.
ರಾಜೀನಾಮೆ ನಾಟಕ ಯಾಕೆ ಆಡಿದ್ದು ಎಂಬ ಮಾಧ್ಯಮಗಳ ಪ್ರಶ್ನೆಗೆ ನಾನೇನು ಬೀದಿ ನಾಟಕ ಮಾಡಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಬೂಲ್ ನಲ್ಲಿ 83 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಹೈಜಾಕ್!