Select Your Language

Notifications

webdunia
webdunia
webdunia
webdunia

ನಕಲಿ ಅಂಕಪಟ್ಟಿ ನೀಡಿ ಉದ್ಯೋಗ ಪಡೆದು ಸಿಕ್ಕಿಬಿದ್ದ ಇಂಜಿನಿಯರ್!

ನಕಲಿ ಅಂಕಪಟ್ಟಿ ನೀಡಿ ಉದ್ಯೋಗ ಪಡೆದು ಸಿಕ್ಕಿಬಿದ್ದ ಇಂಜಿನಿಯರ್!
bengaluru , ಸೋಮವಾರ, 23 ಆಗಸ್ಟ್ 2021 (20:47 IST)
ಅಂತಾರಾಜ್ಯ ವಿವಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಪಡೆದು ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ (ಸಿಪಿಆರ್‍ಐ)ಗೆ ಸಲ್ಲಿಸಿ ಉದ್ಯೋಗ ಪಡೆದಿದ್ದ ಎಂಜಿನಿಯರ್‍ವೊಬ್ಬ ಸಿಂಧುತ್ವ ಪರೀಕ್ಷೆ ವೇಳೆ ಸಿಕ್ಕಿಬಿದ್ದಿದ್ದಾನೆ. 
ನಕಲಿ ಅಂಕಪಟ್ಟಿ ಸಲ್ಲಿಸಿದ ಆರೋಪದಡಿ ನ್ಯೂ ಬಿಇಎಲ್ ರಸ್ತೆಯ ನಿವಾಸಿಯಾ ಮನೀಶ್ ಸಿಂಗ್ (26) ಎಂಬುವರ ವಿರುದ್ಧ ಎಫ್?ಐಆರ್ ದಾಖಲಾಗಿದೆ.
2018ನೇ ಸಾಲಿನಲ್ಲಿ ಸಿಪಿಆರ್‍ಐ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಂಜಿನಿಯರ್ ಹುದ್ದೆಗೆ ಮನೀಶ್ ಸಿಂಗ್ ನೇಮಕಗೊಂಡಿದ್ದರು. ನೇಮಕಾತಿ ವೇಳೆ ಮನೀಶ್ ಸಲ್ಲಿಸಿದ್ದ ಐಐಟಿ ಅಂಕಪಟ್ಟಿ ಸಿಂಧುತ್ವ ಪರಿಶೀಲನೆಗಾಗಿ ಅಸ್ಸಾಂನ ಗುವಾಹಟಿ ಐಐಟಿಗೆ ಕಳುಹಿಸಲಾಗಿತ್ತು. ಅಂಕಪಟ್ಟಿ ಪರಿಶೀಲನೆ ನಡೆಸಿದ ಐಐಟಿ ಅಧಿಕಾರಿಗಳು, ನಕಲಿ ಎಂದು ದೃಢೀಕರಿಸಿದ್ದಾರೆ. ಡಿಜಿಟಲ್ ಬೆರಳಚ್ಚು ಬೇರೊಬ್ಬ ಅಭ್ಯರ್ಥಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ ಎನ್ನಲಾಗಿದೆ.
ಈ ಸಂಬಂಧ ಸಿ.ವಿ.ರಾಮನ್ ನಗರದ ಸಿಪಿಆರ್‍ಐ ಆಡಳಿತಾಧಿಕಾರಿ ಕೆ.ಪ್ರವೀಣ್ ಕುಮಾರ್ ಸದಾಶಿವನಗರ ಪೆÇಲೀಸ್?? ಠಾಣೆಗೆ ದೂರು ನೀಡಿದ್ದು, ಸರಕಾರಿ ನೌಕರಿ ಸಲುವಾಗಿ ನಕಲಿ ಅಂಕಪಟ್ಟಿ ಸಲ್ಲಿಸಿದ ಮನೀಷ್?? ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇದರ ಅನ್ವಯ ಆರೋಪಿ ವಿರುದ್ಧ ಎಫ್?ಐಆರ್ ದಾಖಲಿಸಿ, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂಗೆ 5 ವರ್ಷ ಕೊಡಿ: ಎಚ್.ಡಿ.ಕುಮಾರಸ್ವಾಮಿ ಮನವಿ