Select Your Language

Notifications

webdunia
webdunia
webdunia
webdunia

ನಂಗೆ 5 ವರ್ಷ ಕೊಡಿ: ಎಚ್.ಡಿ.ಕುಮಾರಸ್ವಾಮಿ ಮನವಿ

hd kumaraswamy gadag jds
gadag , ಸೋಮವಾರ, 23 ಆಗಸ್ಟ್ 2021 (20:42 IST)
ಜಾತಿ ನೋಡ್ಬೇಡಿ.. ದುಡ್ಡು ನೋಡ್ಬೇಡಿ.. ನನಗೋಸ್ಕರ ಐದು ವರ್ಷ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾ
ಡಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 75 ವರ್ಷದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ಪಕ್ಷ ನೋಡಿದ್ದೀರಿ. 20 ವರ್ಷ ಕೊಡಿ ಅಂತ ಕೇಳಲ್ಲ. 5 ವರ್ಷ ಕೊಡಿ ಎಂದರು.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಒಂದು ಅವಕಾಶ ಕೊಟ್ಟು ನೋಡಿ. ರೈತರ ಸಾಲ ಮನ್ನಾ ವಿಚಾರದಲ್ಲಿ ನಾನು ಯಾವು ರೀತಿ‌ ನಡೆದುಕೊಂಡಿದ್ದೇನೆ ಅನ್ನೋದು ನಿಮಗೆ ಗೊತ್ತು. ಒಂದು ಚುನಾವಣೆ ಪರೀಕ್ಷೆ ಮಾಡಿ. ನಿಮ್ಮ ಬದುಕನ್ನ ಒಳ್ಳೆಯ ರೀತಿ ಮಾಡುವೆ ಎಂದು ಅವರು ಮನವಿ ಮಾಡಿದರು.
ಇನ್ನೊಬ್ಬರ ಜೊತೆ ಸರ್ಕಾರ ಮಾಡೋದಕ್ಕೆ ಆಗಲ್ಲ. ಸ್ವತಂತ್ರ ಸರ್ಕಾರ ಕೊಡಿ. ಯಾವ ಸರ್ಕಾರಕ್ಕೂ ಅರ್ಜಿ ಕೊಡದ ರೀತಿಯಲ್ಲಿ ಯೋಜನೆಗಳನ್ನ ಸಿದ್ಧ ಮಾಡಿದ್ದೇನೆ. ಜಿಲ್ಲಾ ಪಂಚಾಯ್ತಿ ತಾಲೂಕು ಪಂಚಾಯ್ತಿ ಜೊತೆಗೆ ಒಬ್ಬ ಶಾಸಕರನ್ನೂ ಕೊಡಿ ಎಂದು ಕುಮಾರಸ್ವಾಮಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಆರಂಭದ ಮೊದಲ ದಿನ ಖಾಸಗಿ ಶಾಲೆಗಳಲ್ಲಿ ನಿಯಮ ಉಲ್ಲಂಘನೆ!