Publish Date: Tue, 16 May 2023 (20:48 IST)
Updated Date: Tue, 16 May 2023 (19:37 IST)
ಪಕ್ಷದ ಇಚ್ಛೆಯಂತೆ ವಿ.ಸೋಮಣ್ಣ ಎರಡು ಕಡೆ ಸ್ಪರ್ಧೆ ಮಾಡಿದ್ದರು. ಚಾಮರಾಜನಗರ, ವರುಣಾ ಎರಡು ಕ್ಷೇತ್ರಗಳಲ್ಲಿ ಪರಾವಭವಗೊಂಡಿದ್ದಾರೆ. ಅವರಿಗೆ ಮುಂದೆ ಒಳ್ಳೆಯ ಅವಕಾಶ ಸಿಗುತ್ತೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.ನಗರದಲ್ಲಿ ಇಂದು ಮಾತನಾಡಿದಂತ ಅವರು, ನಮ್ಮ ವರಿಷ್ಠರು ಕೂಡ ವಿ.ಸೋಮಣ್ಣ ಜೊತೆಗೆ ಮಾತನಾಡಿದ್ದಾರೆ. ಅವರಿಗೆ ಮುಂದೆ ಒಳ್ಳೆಯ ಅವಕಾಶ ಸಿಗುತ್ತದೆ ಎಂದು ತಿಳಿಸಿದರು.ಶಾಸಕಾಂಗ ಪಕ್ಷದ ಸಭೆ ಕರೆಯಲು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ನಾಳೆ ಅಥವಾ ನಾಡಿದ್ದು ಬಿಜೆಪಿ ಶಾಸಕಾಂಗ ಸಭೆ ಕರೆಯಬಹುದು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಮೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು