Select Your Language

Notifications

webdunia
webdunia
webdunia
webdunia

ನಗರದಲ್ಲಿ ಮುಂದಿನ 3 ದಿನ ಮುಂದುವರೆಯಲಿರುವ ವರ್ಷಧಾರೆ

The next 3 days of the year in the city
bangalore , ಮಂಗಳವಾರ, 10 ಮೇ 2022 (20:31 IST)
ಅಸಾನಿ ಚಂಡಮಾರುತ ಪರಿಣಾಮ ಕಳೆದ ಕೆಲ ದಿನಗಳಿಂದ ನಗರದ ಹಲವು ಬಡಾವಣೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
 
ಇಂದು ಕೂಡ ನಗರದಲ್ಲಿ ಮೋಡ ಕವಿದ ವಾತವರಣವಿದ್ದು, ಸೈಕ್ಲೋನ್ ಪರಿಣಾಮ ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 3 ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 
ಮಂಗಳವಾರ ಗುಡುಗು ಮಿಂಚು ಸಹಿತ ಭಾರಿ ಮಳೆಯ ಹಿನ್ನಲೆಯಲ್ಲಿ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
 
ಹೆಚ್ಚುವರಿ ಮಳೆ: 
 
ಮಾರ್ಚ್ 1ರಿಂದ ಮೇ 9ರವರೆಗೆ ನಗರದಲ್ಲಿ ವಾಡಿಕೆಯಂತೆ 72 ಮಿ.ಲಿ ಮೀಟರ್ ಬದಲಾಗಿ 125 ಮಿ.ಲಿ ಮೀಟರ್ ಮಳೆ ಸುರಿದಿದೆ ಎಂದು ತಿಳಿಸಿದೆ.
 
 
 ನಗರದಲ್ಲಿ ಮಳೆ:
 
ನಿನ್ನೆ ರಾತ್ರಿ 8.45ಕ್ಕೆ ಅರಂಭವಾದ ಮಳೆ ಅರ್ಧ ಗಂಟೆ ಕಾಲ ಜೋರಾಗಿ ಸುರಿಯಿತು. ತಡ ರಾತ್ರಿವರೆಗೂ ಜಿಟಿ ಜಿಟಿ ಮಳೆಯಾಗಿದೆ. ಗುಡುಗು ಮಿಂಚಿನ ಮಳೆಗೆ ಹಲವು ರಸ್ತೆಗಳು ಹೊಳೆಯಾಗಿ ಮಾರ್ಪಟ್ಟಿದ್ದವು. ರಸ್ತೆಗಳ ಮೇಲೆ 2-3 ಅಡಿ ನೀರು ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರಮುಖ ರಸ್ತೆಗಳಲ್ಲಿರುವ ಮರದ ಕೊಂಬೆಗಳು ಮುರಿದುಬಿದ್ದವು. ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದರಿಂದ ನಗರದ ಹಲವು ಬಡಾವಣೆಗಳಲ್ಲಿನ ನಿವಾಸಿಗಳು ಪರದಾಡಿದರು. ಮ್ಯಾನ್‌ಹೋಲ್‌ಗಳು ಉಕ್ಕಿಹರಿದ ಪರಿಣಾಮ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿರುವುದು ಅಲ್ಲಲ್ಲಿ ಕಂಡುಬಂದಿದೆ.
 
ನಗರದ ಹಲವು ಬಡಾವಣೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ: 
 
ಚಾಮರಾಜಪೇಟೆ, ಜಯನಗರ, ಜೆ.ಪಿ.ನಗರ, ಮೈಸೂರು ರಸ್ತೆ, ವಿಶ್ವೇಶ್ವರ ಪುರ, ಮೆಜೆಸ್ಟಿಕ್, ಕೆ.ಆರ್‌.ಮಾರುಕಟ್ಟೆ, ವಿಜಯನಗರ, ನಾಗರಭಾವಿ, ಹೆಬ್ಬಾಳ, ಬಸವೇಶ್ವರನಗರ, ರಾಜಾಜಿನಗರ, ಕೆಂಗೇರಿ, ಕೋರಮಂಗಲ ಸೇರಿ ನಗರದ ಹಲವು ಬಡಾವಣೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

10 ಕೋಟಿಗೆ ‘ವಿಕ್ರಾಂತ್‌ ರೋಣ’ ಸೇಲ್‌