Select Your Language

Notifications

webdunia
webdunia
webdunia
webdunia

ಅಳಿಯ ಕಾಲು ತುಳಿದಿದ್ದಕ್ಕೆ ಮಾವನ ಹೆಣ ಬಿತ್ತು

ಅಳಿಯ ಕಾಲು ತುಳಿದಿದ್ದಕ್ಕೆ ಮಾವನ ಹೆಣ ಬಿತ್ತು
ಬಾಗಲಕೋಟೆ , ಮಂಗಳವಾರ, 15 ಅಕ್ಟೋಬರ್ 2019 (16:33 IST)

ಅಳಿಯನೊಬ್ಬ ಯುವಕನ ಕಾಲು ತುಳಿದ ಘಟನೆಗೆ ಸಂಬಂಧಿಸಿದಂತೆ ಆತನ ಮಾವನನ್ನೇ ದುಷ್ಕರ್ಮಿಗಳು ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ.

ಬಾಗಲಕೋಟೆಯ ಬೇವೂರಿನಲ್ಲಿ ಘಟನೆ ನಡೆದಿದ್ದು, ಬಸ್ ಚಾಲಕ ಶಿವಪ್ಪ ಪೂಜಾರಿ ಕೊಲೆಯಾದವರು.

ವಾಲ್ಮೀಕಿ ಜಯಂತ್ಯುತ್ಸವದ ಸಂಭ್ರಮದಲ್ಲಿ ಮೆರವಣಿಗೆ ವೇಳೆ ಕೊಲೆಯಾದ ಶಿವಪ್ಪ ಅವರ ಅಳಿಯ ಅಯ್ಯಪ್ಪ ಯುವಕನೊಬ್ಬನ ಕಾಲು ತುಳಿದಿದ್ದರು. ಆಗ ಸಣ್ಣ ಗಲಾಟೆಯಾಗಿತ್ತು.

ಆದರೆ ಮತ್ತೆ ಶಿವಪ್ಪನನ್ನು ತಡೆದ ಕೆಲವರು ಗಲಾಟೆ ಶುರುವಿಟ್ಟುಕೊಂಡಿದ್ದಾರೆ. ಆಗ 8 ಜನರ ಗುಂಪು ಶಿವಪ್ಪನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ರಾಜ್ಯೋತ್ಸವ ಸಂಭ್ರಮದ ಮೇಲೆ ನೆರೆ ನೆರಳು