Select Your Language

Notifications

webdunia
webdunia
webdunia
webdunia

ಮೋದಿ ಬಂದ ಮೇಲೆ ಬೀಪ್ ಎಕ್ಸ್ ಪೋರ್ಟ ಜಾಸ್ತಿ ಆಗಿದೆ ಎಂದ ಎಂಎಲ್ಸಿ

ಮೋದಿ ಬಂದ ಮೇಲೆ ಬೀಪ್ ಎಕ್ಸ್ ಪೋರ್ಟ ಜಾಸ್ತಿ ಆಗಿದೆ ಎಂದ ಎಂಎಲ್ಸಿ
ವಿಜಯಪುರ , ಬುಧವಾರ, 14 ನವೆಂಬರ್ 2018 (18:18 IST)
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬೀಪ್ ಎಕ್ಸ್ ಪೋರ್ಟ ಜಾಸ್ತಿ ಆಗಿದೆ. ಮೋದಿ ಆಡಳಿತಕ್ಕೆ ಬಂದ ಮೇಲೆ ಯಾವೊಬ್ಬ ಸಂಸದರೂ ಪ್ರಶ್ನೆ ಮಾಡುವ ಹಾಗಿಲ್ಲ. ಅಮಿತಾ ಶಾ ಹಾಗೂ ಮೋದಿ ಮಾತನ್ನು ಕೇಳಬೇಕು ಅಷ್ಟೇ ಎಂದು ಕಾಂಗ್ರೆಸ್ ಎಂ ಎಲ್ ಸಿ ವ್ಯಂಗ್ಯವಾಡಿದ್ದಾರೆ.

ಜಿ.ಎಸ್.ಟಿ ಬಂದ ಮೇಲೆ ವ್ಯಾಪಾರಸ್ಥರ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಇಂದು ವಿದೇಶಕ್ಕೆ ರಪ್ತಾಗುತ್ತಿದ್ದ ಬೀಪ್ ಮೌಂಸ್, 26 ಸಾವಿರ ಟನ್ ದಿಂದ 32 ಸಾವಿರ ಟನ್ ಗೆ ಏರಿಕೆ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಮ್.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಬಿ.ಐ ಗವರ್ನರ್ ಭೇಟಿ ಆಗಲು ಮೊದಲು ಪ್ರಧಾನಿ ಕೂಡಾ ಮೂರ್ನಾಲ್ಕು ದಿನ ಕಾಯಬೇಕಿತ್ತು. ಆದರೆ ಈಗ ಪರಿಸ್ಥಿತಿ ಬೇರೆ ಆಗಿದೆ ಎಂದರು.

ಎಸ್.ಎಮ್.ಕೃಷ್ಣ ಅವರಿಗೆ 80 ವರ್ಷವಾಯಿತು. ಅವರಿಂದ ಪಕ್ಷಕ್ಕೆ ಲಾಭವಾದರೂ ಏನು? ಎಂದು ಪ್ರಶ್ನಿಸಿದ ಇಬ್ರಾಹಿಂ, ಅವರು ಪಕ್ಷ ಬಿಟ್ಟು ಹೋದರೂ ಅವರಿಂದ ಯಾವುದೇ ಲಾಭವಿಲ್ಲ ಎಂದು ಟೀಕೆ ಮಾಡಿದರು.

ನಾಲ್ಕು ವರ್ಷದಲ್ಲಿ ಮೋದಿ ಬರೀ ಪ್ರವಾಸ ಮಾಡುವದರಲ್ಲೆ ಕಳೆದಿದ್ದಾರೆ ಎಂದ ಅವರು, ರಾಮ ಮಂದಿರ ವಿವಾದ ಪರಸ್ಪರ ಕುಳಿತು ಬಗೆ ಹರಿಸಿಕೊಳ್ಳಿ. ಇರದಿದ್ದರೆ ಸುಪ್ರೀಂ ಕೋರ್ಟ ಆರ್ಡರ್ ಪಾಲಿಸಿ ಎಂದೂ ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಹೊರರಾಜ್ಯದ ಮೀನುಗಾರರಿಗೆ ಸಿಹಿ ಸುದ್ದಿ ನೀಡಿದ ಗೋವಾ ಸರ್ಕಾರ