Publish Date: Tue, 26 Sep 2023 (14:00 IST)
Updated Date: Tue, 26 Sep 2023 (13:03 IST)
ನೂರಾರು ಅಡಿಕೆ ಗಿಡಗಳು ನಾಶವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಕೊಡ್ಕಣಿ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳು 200ಕ್ಕೂ ಅಧಿಕ ಅಡಿಕೆ ಗಿಡಗಳನ್ನ ಕಡಿದಿದ್ದಾರೆ. ರೈತ ಕಳೆದ ಒಂದು ವರ್ಷದ ಹಿಂದೆ ಅಡಿಕೆ ಗಿಡ ನೆಟ್ಟಿದ್ದ. ಬಾಲಕೃಷ್ಣ ಶಾನಭಾಗ ಎಂಬುವವರಿಗೆ ಸೇರಿದ್ದ ತೋಟಲ್ಲಿ ಅಡಿಕೆ ಗಿಡ ನಾಶವಾಗಿದೆ. ಕಿಡಿಗೇಡಿಗಳು ರಾತ್ರೋ ರಾತ್ರಿ ಅಡಿಕೆ ಗಿಡ ಕಡಿದಿದ್ದಾರೆ. ಅಡಿಕೆ ಗಿಡ ಕಡಿದಿರುವುದನ್ನ ಕಂಡು ರೈತ ಕಣ್ಣೀರು ಹಾಕುತ್ತಿದ್ದಾನೆ. ಬಾಲಕೃಷ್ಣ ಶಾನಭಾಗ ಸುಮಾರು ಒಂದು ಎಕರೆ ಜಮೀನಿನಲ್ಲಿ ಅಡಿಕೆ ಗಿಡ ನೆಟ್ಟಿದ್ರು.