ಕೆರೆ ಕಟ್ಟೆಯನ್ನು ರಾತ್ರೋರಾತ್ರಿ ಜೆಸಿಬಿಯಿಂದ ಒಡೆಯಲಾಗಿದೆ.ಕೆರೆಕಟ್ಟೆ ಒಡೆದಿರುವುದರಿಂದ ರೈತರ ಸಾವಿರಾರು ಎಕರೆಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ.ಇನ್ನು ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿ ಗ್ರಾಮದ ಬಳಿ ನಡೆದಿದೆ.
ಧಾರಾಕಾರವಾಗು ಸುರಿದ ಮಳೆಯಿಂದಾಗಿ ಕೆರೆ ತುಂಬಿದೆ. ಕೆಲವು ಪ್ರಭಾವಿ ವ್ಯಕ್ತಿಗಳ ಲೇಔಟ್ ಹಾಗೂ ಜಮೀನುಗಳಲ್ಲಿ ನೀರು ನಿಂತಿದ್ದ ಕಾರಣ ರಾತ್ರೋರಾತ್ರಿ ಜೆಸಿಬಿ ಯಿಂದ ಕರೆ ಕಟ್ಟೆ ಒಡೆದ ರೈತರ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಇನ್ನು ರೈತರ ಜಮೀನುಗಳಲ್ಲಿ ತರಕಾರಿ, ವಿಧವಿಧವಾದ ಹೂ ಬೆಳೆಗಳು, ದ್ರಾಕ್ಷಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ಬೆಳೆಗಳು ನಷ್ಟವಾಗಿದೆ. ಅದು ಅಲ್ಲದೆ ರೈತರ ಜಮೀನುಗಳಲ್ಲಿ 5ರಿಂದ 6 ಅಡಿಯಷ್ಟು ನೀರು ನಿಂತಿದೆ. ನೀರನ್ನು ಯಾವ ರೀತಿ ಹೊರ ಹಾಕಬೇಕು ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಯಾವ ಒಬ್ಬ ಅಧಿಕಾರಿಯು ಸ್ಥಳಕ್ಕೆ ಬಾರದೆ ರೈತ ವಿಚಾರದಲ್ಲಿ ಗಮನ ಹರಿಸದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.