Select Your Language

Notifications

webdunia
webdunia
webdunia
webdunia

ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಗಾರ್ಮೆಂಟ್ಸ್ ಬಸ್

Garments bus overturned out of control
ಚಿಕ್ಕಬಳ್ಳಾಪುರ , ಗುರುವಾರ, 8 ಸೆಪ್ಟಂಬರ್ 2022 (20:18 IST)
ನಿಯಂತ್ರಣ ತಪ್ಪಿ  ಗಾರ್ಮೆಂಟ್ಸ್ ಬಸ್ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ 18 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇನ್ನು ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮೇಳ್ಯಾ ಗ್ರಾಮದ ಬಳಿ ನಡೆದಿದೆ.ಬಸ್ ನಲ್ಲಿದ್ದ ಓರ್ವ ಮಹಿಳೆಗೆ ಗಂಭೀರ ಗಾಯಗಳಾಗಿದ್ದು 17 ಜನರಿಗೆ ಸಣ್ಣಪುಟ್ಟ ಗಾಯವಾಗಿದೆ.ಆಂಧ್ರದ ವೆಳಿಪಿ ಗ್ರಾಮದ ಅಲುವೇಲಮ್ಮ(35) ಪರಿಸ್ಥಿತಿ ಗಂಭೀರವಾಗಿದೆ.ಅಪಘಾತವಾಗಿ ಒಂದು ಗಂಟೆಯಾದರೂ ಆಂಬ್ಯುಲೆನ್ಸ್  ಮಾತ್ರ ಸ್ಥಳಕ್ಕೆ ಬಂದಿಲ್ಲ.ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಹಾಗೂ ತಿರುವಿನಿಂದ ಅಪಘಾತ ಸಂಭವಿಸಿದೆ.ಹೀಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.
 
ವೆಳಪಿ ಗ್ರಾಮದಿಂದ ಯಿಂದ ದೊಡ್ಡಬಳ್ಳಾಪುರದ ಲಗುನ ಗಾರ್ಮೆಂಟ್ಸ್ ಗೆ ಸಿಬ್ಬಂದಿಯನ್ನು  ಬಸ್ ನಲ್ಲಿ ಕರೆದೋಯ್ಯಲಾಗುತ್ತಿತ್ತು.ಇನ್ನು ಈ ಘಟನೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಹಲವು ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ